Home ಸುದ್ದಿ P cap karnataka police: ರಾಜ್ಯದ ಪೊಲೀಸರಿಗೆ ಇವತ್ತಿಂದ ಪಿ-ಕ್ಯಾಪ್ ಭಾಗ್ಯ

P cap karnataka police: ರಾಜ್ಯದ ಪೊಲೀಸರಿಗೆ ಇವತ್ತಿಂದ ಪಿ-ಕ್ಯಾಪ್ ಭಾಗ್ಯ

Hindu neighbor gifts plot of land

Hindu neighbour gifts land to Muslim journalist

P cap karnataka police: ರಾಜ್ಯದ ಪೊಲೀಸ್‌ ಕಾನ್‌ಸ್ಟೆಬಲ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ಗಳು ಧರಿಸುತ್ತಿದ್ದ ‘ಸ್ಲೋಚ್ ಹ್ಯಾಟ್’ ಬದಲಿಗೆ ‘ಪಿ-ಕ್ಯಾಪ್‌’ಗಳನ್ನು (P-Cap) ವಿತರಣೆ ಮಾಡಲಾಗುತ್ತಿದೆ. ಹೊಸ ಟೋಪಿಗಳು ಇಂದಿನಿಂದಲೇ ಪೊಲೀಸರ ಕೈಸೇರಲಿವೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರು ಹೊಸ ಕ್ಯಾಪ್‌ಗಳನ್ನು ವಿತರಣೆ ಮಾಡಲಿದ್ದಾರೆ. ನಂತರ, ಹಂತಹಂತವಾಗಿ ವಿವಿಧ ಜಿಲ್ಲೆಗಳ ಕಾನ್‌ಸ್ಟೆಬಲ್‌ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗಳಿಗ ಹೊಸ ಕ್ಯಾಪ್‌ ವಿತರಣೆ ನಡೆಯಲಿದೆ.

ಜೂನ್‌ನಲ್ಲಿ ನಡೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಹೊಸ ಕ್ಯಾಪ್‌ ವಿತರಣೆಗೆ ನಿರ್ಧರಿಸಲಾಗಿತ್ತು. ಅದಾದ ಮೇಲೆ ತೆಲಂಗಾಣ ಪೊಲೀಸರು ಧರಿಸುತ್ತಿರುವ ತೆಳುವಾದ ‘ಪಿ ಕ್ಯಾಪ್‌’ ವಿತರಣೆ ಮಾಡಲು ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಿತ್ತು.