Home ಸಾಮಾನ್ಯರಲ್ಲಿ ಅಸಾಮಾನ್ಯರು ಸಾಲುಮರದ ತಿಮ್ಮಕ್ಕನಿಗೆ ದುಬಾರಿ ಉಡುಗೊರೆ ಹಾಗು ಉನ್ನತ ಹುದ್ದೆ ನೀಡಿದ ರಾಜ್ಯದ ಸಿಎಂ

ಸಾಲುಮರದ ತಿಮ್ಮಕ್ಕನಿಗೆ ದುಬಾರಿ ಉಡುಗೊರೆ ಹಾಗು ಉನ್ನತ ಹುದ್ದೆ ನೀಡಿದ ರಾಜ್ಯದ ಸಿಎಂ

Hindu neighbor gifts plot of land

Hindu neighbour gifts land to Muslim journalist

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಪರಿಸರ ರಾಯಭಾರಿ ಗೌರವ ನೀಡುವ ಜತೆಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗುವುದು ಎಂದು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದರು.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಸಾಲುಮರದ ತಿಮ್ಮಕ್ಕನವರ 111ರ ಜನ್ಮದಿನದ ಸಂಭ್ರಮ ಹಾಗೂ ಸಾಲುಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್ ಪ್ರದಾನ ಸಮಾರಂಭದಲ್ಲಿ  ಸಿಎಂ ಬಸವರಾಜ ಬೊಮ್ಮಾಯಿ ಉನ್ನತ ಹುದ್ದೆ ನೀಡಿ ಗೌರವಿಸಿದ್ದಾರೆ. 111 ವರ್ಷ ಸಂಭ್ರಮದಲ್ಲಿರುವ ಸಾಲುಮರದ ತಿಮ್ಮಕ್ಕ ಅವರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡಿ ‘ಗ್ರೀನ್ ಅಂಬಾಸಿಡರ್’ ಗೌರವ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ವಾರ್ತಾ ಇಲಾಖೆಯಿಂದ ಸಾಲುಮರದ ತಿಮ್ಮಕ್ಕ ಅವರ ವೆಬ್‌ಸೀರಿಸ್ ಮಾಡಲಾಗುವುದು. ಅವರಿಗೆ ಬೇಲೂರು ತಾಲ್ಲೂಕಿನಲ್ಲಿ ಹತ್ತು ಎಕರೆ ಭೂಮಿ ಮಂಜೂರು ಮಾಡಲಾಗುವುದು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನದಲ್ಲಿ ಸರ್ಕಾರದಿಂದಲೇ ಮನೆ ನಿರ್ಮಾಣ ಮಾಡಿ ಸಾಲು ಮರದ ತಿಮ್ಮಕ್ಕ ಅವರಿಗೆ ಕೊಡುಗೆ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.