Home Karnataka State Politics Updates ಹಲಾಲ್ ವಿಷಯದಲ್ಲಿ ಸರಕಾರ ಮೂಗು ತೂರಿಸೋದಿಲ್ಲ !

ಹಲಾಲ್ ವಿಷಯದಲ್ಲಿ ಸರಕಾರ ಮೂಗು ತೂರಿಸೋದಿಲ್ಲ !

Hindu neighbor gifts plot of land

Hindu neighbour gifts land to Muslim journalist

ಹಲಾಲ್ ಕಟ್ ಮಾಂಸವನ್ನು ಸ್ವೀಕರಿಸುವುದು, ಬಿಡುವುದು ಜನರಿಗೆ ಬಿಟ್ಟದ್ದು. ಸರ್ಕಾರ ಈ ವಿಷಯದಲ್ಲಿ ಮೂಗು ತೂರಿಸುವುದಿಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಹಲಾಲ್ ಎನ್ನುವುದು ಮುಸ್ಲಿಮರ ಧಾರ್ಮಿಕ ಪದ್ಧತಿ, ಅದು ಸರ್ಕಾರದ ನಿಯಮದೊಳಗೆ ಬರುವುದಿಲ್ಲ.
ಹಲಾಲ್ ಇಷ್ಟವಿದ್ದವರು ಅಂಗಡಿಗಳಲ್ಲಿ ಖರೀದಿ ಮಾಡುತ್ತಾರೆ, ಇಷ್ಟವಿಲ್ಲದವರು ಬೇರೆ ಅಂಗಡಿಗಳಲ್ಲಿ ಕೊಳ್ಳುತ್ತಾರೆ. ಇದನ್ನು ಜನರೇ ಮಾಡಿಕೊಂಡಿದ್ದಾರೆ ವಿನಃ ನಾವು ಮಾಡಿದ್ದಲ್ಲ. ಈ ವಿಷಯವನ್ನು ಜನರು ಎತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮಗೆ ಬೇಕಾದ ವಿಷಯವನ್ನು ಎತ್ತುವ ಅಧಿಕಾರವಿದೆ. ಈ ವಿಷಯವನ್ನು ಸರ್ಕಾರವಾಗಲೀ, ಯಾವುದೇ ರಾಜಕೀಯ ಪಕ್ಷವಾಗಲೀ ಎತ್ತಿಲ್ಲ ಎಂದು ಮಡಿಕೇರಿಯಲ್ಲಿಂದು ಹೇಳಿದ್ದಾರೆ.