Home ಬೆಂಗಳೂರು ಕೆಲಸದ ನಿಮಿತ್ತ ಹೊರ ಹೋಗುತ್ತಿದ್ದ ಪತಿಯ ಮೇಲೆ ಪತ್ನಿಯ ಅನುಮಾನ!! ಕಾರಿನ ಜಿ.ಪಿ.ಎಸ್ ನಿಂದಾಗಿ ಬಯಲಾಯಿತು...

ಕೆಲಸದ ನಿಮಿತ್ತ ಹೊರ ಹೋಗುತ್ತಿದ್ದ ಪತಿಯ ಮೇಲೆ ಪತ್ನಿಯ ಅನುಮಾನ!! ಕಾರಿನ ಜಿ.ಪಿ.ಎಸ್ ನಿಂದಾಗಿ ಬಯಲಾಯಿತು ಸತ್ಯ

Hindu neighbor gifts plot of land

Hindu neighbour gifts land to Muslim journalist

ಪುಣೆ: ಕೆಲಸದ ನಿಮಿತ್ತ ಹೊರ ಊರುಗಳಿಗೆ ತೆರಳುತ್ತಿದ್ದ ಪತಿಯ ಮುಖದಲ್ಲಿ ಇರುತ್ತಿದ್ದ ಖುಷಿಯನ್ನು ಕಂಡು ಅನುಮಾನ ಪಟ್ಟ ಪತ್ನಿ ಕೊನೆಗೂ ಪತಿಯನ್ನು ರೆಡ್ ಹಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾಳೆ.

ಹೌದು, ಇಂತಹದೊಂದು ಘಟನೆ ನಡೆದದ್ದು ಪುಣೆಯಲ್ಲಿ. ಸದಾ ಆಫೀಸ್ ಕೆಲಸದ ನಿಮಿತ್ತ ಮಹಿಳೆಯೋರ್ವಳ ಪತಿ ಹೊರ ರಾಜ್ಯಗಳಿಗೆ, ಹೊರ ಜಿಲ್ಲೆಗಳಿಗೆ ತೆರಳುತ್ತಿದ್ದನು. ಹೀಗೆ ತೆರಳುವಾಗ ಆತ ಬಹಳ ಖುಷಿಯಲ್ಲಿರುವುದು, ಹಾಗೂ ಹೋಗಿ ಬಂದ ಬಳಿಕವೂ ಖುಷಿಯಲ್ಲಿರುವುದನ್ನು ಕಾಣುತ್ತಿದ್ದ ಪತ್ನಿಯು ಆತನ ನಡವಳಿಕೆಯ ಮೇಲೆ ನಿಗಾ ಇಟ್ಟಿದ್ದಳು.

ಅದರಂತೆ ಈ ಬಾರಿ ಪತಿಯು ಕೆಲಸದ ನಿಮಿತ್ತ ಬೆಂಗಳೂರಿಗೆ ಹೋದಾಗ ಪತ್ನಿಯು ಆತನಿಗೆ ಅರಿವಿಲ್ಲದಂತೆ ಕಾರಿಗೆ ಜಿ.ಪಿ.ಎಸ್ ಅಳವಡಿಸಿದ್ದಳು.ಆದರೆ ಕಾರು ಬೆಂಗಳೂರು ತಲುಪುವುದು ಬಿಟ್ಟು ಪುಣೆ ತಲುಪಿದ್ದರಿಂದ ಆಕೆಯ ಅನುಮಾನಕ್ಕೆ ಇನ್ನಷ್ಟು ಬಲ ಬಂದಿದೆ.ಕೂಡಲೇ ಆಕೆ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಆತನನ್ನು ಹಿಂಬಾಲಿಸಿದ್ದರು.

ಪತಿ ಆತನ ಇನ್ನೋರ್ವ ಗರ್ಲ್ ಫ್ರೆಂಡ್ ಜೊತೆ ಪುಣೆಯ ಲಾಡ್ಜ್ ಒಂದರಲ್ಲಿ ರೂಮ್ ಪಡೆದು ತಂಗಿರುವ ಬಗ್ಗೆ ಮಾಹಿತಿ ಪಡೆದ ಮಹಿಳೆ ಹಾಗೂ ಪೊಲೀಸರು ಲಾಡ್ಜ್ ನಲ್ಲಿ ವಿಚಾರಿಸಿದಾಗ ಮಹಿಳೆಯ ಹೆಸರಿನಲ್ಲಿಯೇ ಇನ್ನೊಬ್ಬ ಯುವತಿಯನ್ನು ತನ್ನ ಹೆಂಡತಿ ಎಂದು ಹೇಳಿಕೊಂಡಿರುವ ಸತ್ಯ ಬಯಲಾಗಿದೆ.

ಅಂತೂ ಮಹಿಳೆಯ ಅನುಮಾನ ಕೊನೆಗೂ ಸತ್ಯವಾಗಿದ್ದು, ಮಹಿಳೆಗೆ ಮೋಸ ಮಾಡಿದ ಆಕೆಯ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ.