Home ಬೆಂಗಳೂರು ಮಕ್ಕಳ ದಿನಾಚರಣೆ ಗೆ ‘ವಂಡರ್‌ ಲಾ’ ನೀಡುತ್ತಿದೆ ಉಚಿತ ಪ್ರವೇಶ | ಮಕ್ಕಳಂತೆ ಸಿದ್ಧರಾಗಿ ಹೋಗೋ...

ಮಕ್ಕಳ ದಿನಾಚರಣೆ ಗೆ ‘ವಂಡರ್‌ ಲಾ’ ನೀಡುತ್ತಿದೆ ಉಚಿತ ಪ್ರವೇಶ | ಮಕ್ಕಳಂತೆ ಸಿದ್ಧರಾಗಿ ಹೋಗೋ ದೊಡ್ಡವರಿಗೂ ಇದೆ ಈ ಆಫರ್

Hindu neighbor gifts plot of land

Hindu neighbour gifts land to Muslim journalist

‘ವಂಡರ್‌ ಲಾ’ದ ಪರಿಚಯ ಇಲ್ಲದ ಜನರಿರುವುದು ಅಪರೂಪವೇ ಸರಿ. ಯಾಕಂದ್ರೆ, ಇದು ಅಷ್ಟರ ಮಟ್ಟಿಗೆ ಜನಪ್ರಿಯವಾಗಿದೆ. ಇಂತಹ ಫೇಮಸ್ ಪ್ರವಾಸಿ ತಾಣ ಪ್ರತಿಯೊಂದು ವಿಶೇಷ ದಿನಗಳನ್ನು ಅದ್ದೂರಿಯಾಗಿ ಆಚರಿಸಲು ಹೊಸ ಆಫರ್ ಕೊಡುವ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.

ಅದರಂತೆ ಇದೀಗ, ಮಕ್ಕಳ ದಿನಾಚರಣೆಯಂದು ಎಲ್ಲರನ್ನೂ ಮಕ್ಕಳಾಗಿಸಲು ವಂಡರ್ ಲಾ ಪ್ರಯತ್ನಿಸುತ್ತಿದೆ. ಹೌದು. ಮಕ್ಕಳಿಗೆ ಅಷ್ಟೇ ಅಲ್ಲದೆ, ದೊಡ್ಡವರು ಮಕ್ಕಳಂತೆ ರೆಡಿ ಆಗಿ ಬಂದ್ರೆ ಅವರಿಗೂ ಉಚಿತ ಪ್ರವೇಶ ನೀಡಲಾಗುತ್ತದೆ. ನವೆಂಬರ್‌ 12 ರಿಂದ 14 ರವರೆಗೆ ಈ ಆಫರ್‌ ಚಾಲ್ತಿಯಲ್ಲಿರಲಿದೆ. ದೊಡ್ಡವರು ಮಕ್ಕಳ ರೀತಿ ಉಡುಪು ಧರಿಸಿ ಬಂದರೆ, ಅವರಿಗೆ ಮಕ್ಕಳ ಟಿಕೆಟ್‌ ನೀಡುವುದಾಗಿ ಘೋಷಿಸಿದೆ.

ಚಿಕ್ಕ ಮಕ್ಕಳಂತೆ ಶಾಲಾ ಸಮವಸ್ತ್ರ ಧರಿಸಿ, ಒಂದು ಕೈಯಲ್ಲಿ ಬಾಟಲ್‌, ಮತ್ತೊಂದು ಕೈಲಿ ಲಾಲಿಪಾಪ್‌ ಕ್ಯಾಂಡಿ, ಚಿಕ್ಕ ಮಕ್ಕಳ ಬ್ಯಾಗ್‌ (ಹಳೆಯ ಶೈಲಿಯಲ್ಲಿ) ಸೇರಿದಂತೆ ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಹೇಗೆ ಸಿದ್ಧವಾಗುತ್ತಿದ್ದರೂ ಅದೇ ಶೈಲಿಯಲ್ಲಿ ಸಿದ್ಧವಾಗಿ ಬಂದವರು ಮಾತ್ರ ಈ ಮಕ್ಕಳ ಟಿಕೆಟ್‌ಗೆ ಅರ್ಹರಾಗಿರುತ್ತಾರೆ. ಮಕ್ಕಳಂತೆ ಸಿದ್ಧವಾಗಿ ಬರುವವ ಮೊದಲ 1000 ಜನರಿಗೆ ಈ ಟಿಕೆಟ್‌ ಲಭ್ಯವಿರಲಿದೆ. ಹೀಗೆ ಸಿದ್ಧವಾಗಿ ಬಂದವರನ್ನು ಒಂದೆಡೆ ಸೇರಿಸಿ ಅವರಿಗೆ ವೋಚರ್‌ ನೀಡಲಾಗುವುದು, ಈ ವೋಚರ್‌ನ ಮೂಲಕ ಅವರು ಟಿಕೆಟ್‌ ಕೌಂಟರ್‌ನಲ್ಲಿ ಮಕ್ಕಳ ಟಿಕೆಟ್‌ ಪಡೆಯಬಹುದು.

ಇದಷ್ಟೇ ಅಲ್ಲದೇ, ಚಿತ್ರಕಲಾ ಸ್ಪರ್ಧೆ, ಸಲಾಡ್ ಡ್ರೆಸ್ಸಿಂಗ್, ಟ್ಯಾಲೆಂಟ್ ಶೋ, ಹಾಡುಗಾರಿಕೆ, ಕಥೆ ಹೇಳುವುದು ಮುಂತಾದ ಮನರಂಜನಾ ಚಟುವಟಿಕೆಗಳನ್ನು ಸಹ ಆಯೋಜಿಸಲಾಗಿದ್ದು, ಗೆದ್ದವರಿಗೆ ಬಹುಮಾನವಿರಲಿದೆ. ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲಾ ಅಗತ್ಯ ವಸ್ತುಗಳನ್ನು ವಂಡರ್ಲಾ ಒದಗಿಸಲಿದೆ.

ವಯಸ್ಕರಲ್ಲಿಯೂ ಮಗುವಿನ ಮನಸ್ಸನ್ನು ಜೀವಂತವಾಗಿಡುವ ಉದ್ದೇಶದಿಂದ ಈ ಆಫರ್ ಘೋಷಿಸಿದ್ದೇವೆ ಎಂದು ವಂಡರ್‌ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕಾರದ ಶ್ರೀ ಅರುಣ್‌ ಕೆ. ಚಿಟ್ಟಿಲಪಿಳ್ಳಿ ಅವರು ಹೇಳಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ https://www.wonderla.com/offers/childrens-day-offer.html ಈ ವೆಬ್‌ಸೈಟ್‌ಗೆ ಭೇಟಿ ನೀಡಿ.