Home ಬೆಂಗಳೂರು ‘ನಿಜವಾಗಿ ಪ್ರೀತಿಸುತ್ತಿದ್ದರೆ ಮನೆಗೆ ಬಾ’ ಎಂದ ಪ್ರಿಯಕರ| ನಂಬಿ ಹೋದ ಪ್ರಿಯತಮೆಗೆ ಮತ್ತು ಬರುವ ಔಷಧಿ...

‘ನಿಜವಾಗಿ ಪ್ರೀತಿಸುತ್ತಿದ್ದರೆ ಮನೆಗೆ ಬಾ’ ಎಂದ ಪ್ರಿಯಕರ| ನಂಬಿ ಹೋದ ಪ್ರಿಯತಮೆಗೆ ಮತ್ತು ಬರುವ ಔಷಧಿ ನೀಡಿ, ಸ್ನೇಹಿತನೊಂದಿಗೆ ಸೇರಿ ಬರ್ಬರ ಅತ್ಯಾಚಾರ| ಇಬ್ಬರು ಅರೆಸ್ಟ್

Hindu neighbor gifts plot of land

Hindu neighbour gifts land to Muslim journalist

ಪ್ರೀತಿಯಿಂದ ಪ್ರಿಯಕರ ಕರೆದನೆಂದು ಆತನನ್ನು ನಂಬಿ ಮನೆಗೆ ಹೋದ ಯುವತಿ ಈಗ ಬರ್ಬರವಾಗಿ ಅತ್ಯಾಚಾರಕ್ಕೀಡಾಗಿದ್ದಾಳೆ.

ಹೌದು, ಒಡಿಶಾ ಮೂಲದ ಯುವತಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಉತ್ತರ ಭಾರತ ಮೂಲದ ಯುವಕನನ್ನು ಪ್ರೀತಿಸುತ್ತಿದ್ದಳು. ಆರೋಪಿ ಕಿತ್ತಗಾನಹಳ್ಳಿ ಸಮೀಪ ವಾಸವಾಗಿದ್ದು, ಆತನ ಮನೆಯಿಂದ ಸ್ವಲ್ಪ ದೂರದಲ್ಲೇ ಯುವತಿ ಮನೆಯಿದ್ದು, ಆಕೆಯನ್ನು ಪರಿಚಯಿಸಿಕೊಂಡು ಪ್ರೀತಿಸಿದ್ದಾನೆ. ಕಳೆದ ವಾರ ಮನೆಗೆ ಬರಲು ಹೇಳಿದ್ದಾನೆ. ಆದರೆ ರಾತ್ರಿ ವೇಳೆ ಆತನ ಮನೆಗೆ ಹೋಗಲು ಯುವತಿ ನಿರಾಕರಿಸಿದ್ದಾಳೆ. ನಿಜವಾಗಿ ಪ್ರೀತಿಸುತ್ತಿದ್ದರೆ ಬಾ ಎಂದು ಕರೆದಿದ್ದಾನೆ. ಇಷ್ಟು ಮಾತ್ರವಲ್ಲದೇ ಅದೇ ಮಾರ್ಗವಾಗಿ ಬರುತ್ತಿದ್ದ ತನ್ನ ಸ್ನೇಹಿತನೊಂದಿಗೆ ಬರುವಂತೆ ಬಲವಂತ ಮಾಡಿದ್ದಾನೆ ಕೂಡಾ.

ಆತನ ಬಲವಂತದಿಂದ ಯುವತಿ ಪ್ರಿಯಕರನ ಸ್ನೇಹಿತನೊಂದಿಗೆ ಮನೆಗೆ ಆಗಮಿಸಿದ್ದಾಳೆ. ಈ ವೇಳೆ ಮತ್ತು ಬರುವ ಔಷಧ ನೀಡಿ ಪ್ರಿಯಕರ ಮತ್ತು ಆತನ ಸ್ನೇಹಿತ ಅತ್ಯಾಚಾರ ಎಸಗಿದ್ದಾರೆ. ಯುವತಿಗೆ ಎಚ್ಚರವಾದ ಬಳಿಕ ಮನೆಗೆ ಬಿಟ್ಟು ಬಂದಿದ್ದಾರೆ.

ಯುವತಿ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದ ಸೂರ್ಯಸಿಟಿ ಠಾಣೆ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಸಂತ್ರಸ್ತೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.