Home ಬೆಂಗಳೂರು ಮನೆಯಲ್ಲಿ ಯಾರೂ ಇಲ್ಲ ಬಾ…ಎಂದ ಯುವತಿ | ನಂಬಿ ಹೋದ ಯುವಕ ಖೆಡ್ಡಕ್ಕೆ ಬಿದ್ದ

ಮನೆಯಲ್ಲಿ ಯಾರೂ ಇಲ್ಲ ಬಾ…ಎಂದ ಯುವತಿ | ನಂಬಿ ಹೋದ ಯುವಕ ಖೆಡ್ಡಕ್ಕೆ ಬಿದ್ದ

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ರಾಜ್ಯದಲ್ಲಿ ಹನಿ ಟ್ರ್ಯಾಪ್(Honey Trap) ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ಬಾರಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದೇ ಹೇಳಬಹುದು. ಇದಕ್ಕೆ ಪೂರಕವಾಗಿ ಬಿಟಿಎಂ ಲೇಔಟ್‌ನಲ್ಲೂ(BTM Layout) ಒಂದು ಪ್ರಕರಣ ಬೆಳಕಿಗೆ ಬಂದಿದೆ. ದಿಲೀಪ್ ಕುಮಾರ್ ಎಂಬ ಯುವಕ ಪ್ರಿಯಾ ಎಂಬ ಹೆಸರಿನ ಯುವತಿಯ ಮೋಸದ ಜಾಲಕ್ಕೆ ಬಿದ್ದು ಹೋಗಿದ್ದಾನೆ. ಅಪರಿಚಿತ ಯುವತಿಯ ಮೆಸೇಜ್ ನಂಬಿ ಹೋದ ದಿಲೀಪ್, ಯುವತಿ ಕೊಟ್ಟ ಶಾಕ್‌ಗೆ ಥಂಡಾ ಹೊಡೆದಿದ್ದಾನೆ. ಮನೆಯಲ್ಲಿ ಯಾರೂ ಇಲ್ಲ ಬಾ ಅಂದು ಯುವತಿ ದಿಲೀಪ್‌ಗೆ ಮೆಸೇಜ್ ಮಾಡಿದ್ದಳು. ಹೀಗಾಗಿ ಮೆಸೇಜ್ ನೋಡಿ ಯುವತಿ ಭೇಟಿಯಾಗಲು ಹೋದವನ ವಿಡಿಯೋ ಚಿತ್ರೀಕರಿಸಿ ಯುವತಿ ಸುಲಿಗೆ ಮಾಡಿದ್ದಾಳೆ.

ಮೆಸೇಜ್ ಮೂಲಕ ದಿಲೀಪ್ ಕುಮಾರ್ ಗೆ ಪರಿಚಯವಾಗಿದ್ದ ಪ್ರಿಯಾ ಅಕ್ಟೋಬರ್ 27ರಂದು ಭೇಟಿಯಾಗುವುದಾಗಿ ಒತ್ತಾಯಿಸಿ ಮನೆಗೆ ಕರೆಸಿಕೊಂಡಿದ್ದಳು. ಇದಕ್ಕೆ ಒಪ್ಪಿ ಬಿಟಿಎಂ ಲೇಔಟ್ ಮೊದಲನೇ ಹಂತದಲ್ಲಿದ್ದ ಪ್ರಿಯಾಳ ಮನೆಗೆ ದಿಲೀಪ್ ಹೋಗಿದ್ದ. ದಿಲೀಪ್ ಮನೆ ಒಳಗೆ ಬರುತ್ತಿದ್ದಂತೆ, ನಾಲ್ವರು ಯುವಕರು ಮುಂದೆ ಬಂದು ಚಾಕು ತೋರಿಸಿ ಹಣ ಮೊಬೈಲ್ ಕೊಡುವಂತೆ ಬೆದರಿಸಿದ್ದರು. ಬಳಿಕ ದಿಲೀಪ್ ಕುಮಾರ್ ಪಕ್ಕ ಯುವತಿಯನ್ನು ನಿಲ್ಲಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ. ಹಣ ನೀಡದಿದ್ದರೆ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ದಿಲೀಪ್ ಕುಮಾರ್ ತನ್ನ ಬಳಿ ಇದ್ದ 26 ಸಾವಿರ ನಗದು, ಐಫೋನ್, ಕಾರ್ ಕೀ ನೀಡಿದ್ದಾರೆ.

25 ಸಾವಿರ ರೂ ಹಣವನ್ನು ಸಹೋದರನಿಂದ ಯುಪಿಐ ಮೂಲಕ ವರ್ಗಾವಣೆ ಮಾಡಿಸಿದ್ದಾರೆ. ಅಷ್ಟು ಮಾತ್ರವಲ್ಲದೇ, ಕಾರು ಬೇಕೆಂದ್ರೆ 60 ಸಾವಿರ ನೀಡುವಂತೆ ಆರೋಪಿಗಳು ಒತ್ತಾಯ ಮಾಡಿದ್ದಾರೆ. ಇದೆಲ್ಲ ಆದ ಬಳಿಕ ದಿಲೀಪ್ ಸುದ್ದಗುಂಟೆಪಾಳ್ಯ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಹನಿ ಟ್ರ್ಯಾಪ್ ಹಿಂದಿನ ಯುವತಿಯನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದು ಉಳಿದ ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.