Home ಬೆಂಗಳೂರು 2ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ | ಶಿಕ್ಷಕ ಅರೆಸ್ಟ್

2ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ | ಶಿಕ್ಷಕ ಅರೆಸ್ಟ್

Hindu neighbor gifts plot of land

Hindu neighbour gifts land to Muslim journalist

ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಿಕ್ಷಕನೇ ಕಾಮಾಂಧನಾದರೇ ಏನು ಮಾಡೋಣ ? ಹೆತ್ತ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಲೆಂದು ಶಾಲೆಗೆ ಕಳುಹಿಸಿದರೆ ಅಲ್ಲಿ ಈ ರೀತಿಯ ಶಿಕ್ಷಕರಿದ್ದರೆ ಹೆತ್ತವರು ಏನು ಮಾಡಬೇಕು ? ಹೇಳಿ…

ಹೌದು, ಎರಡನೇ ತರಗತಿಯ ವಿದ್ಯಾರ್ಥಿನಿಗೆ ಶಿಕ್ಷಕನೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆಯೊಂದು ಕೆ ಆರ್ ಪೇಟೆ ತಾಲೂಕಿನ ಗಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಹೀಗೊಂದು ಹೀನ ಕೃತ್ಯವನ್ನು ಶಿಕ್ಷಕ ಚಂದ್ರಶೇಖರ್ ಎಂಬಾತ ನಡೆಸಿರೋದು ಬೆಳಕಿಗೆ ಬಂದಿದೆ.

2ನೇ ತರಗತಿ ವಿದ್ಯಾರ್ಥಿನಿ, ಇಂದು ಶಾಲೆಗೆ ಹೋಗೋದಿಲ್ಲ ಎಂಬುದಾಗಿ ಹಠ ಹಿಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಈ ವಿಷಯವನ್ನು ಬಿಇಒ ಗಮನಕ್ಕೆ ಗ್ರಾಮಸ್ಥರು ತಂದಿದ್ದಾರೆ. ಕೂಡಲೇ ವಿಷಯದ ಗಂಭೀರತೆಯನ್ನು ಅರಿತಂತ ಬಿಇಓ ಬಸವರಾಜ ಅವರು, ಶಿಕ್ಷಕ ಚಂದ್ರಶೇಖರ್ ನನ್ನು ಅಮಾನತುಗೊಳಿಸಿದ್ದಾರೆ. ಪೋಷಕರು ಕಿಕ್ಕೇರಿ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಅವರನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.