Home ಬೆಂಗಳೂರು ಸಮಾಜದಲ್ಲಿ ಪೊಲೀಸ್ ಇಲಾಖೆಗೆ ಮಹತ್ತರದ ಜವಾಬ್ದಾರಿ ಇದೆ! ಜಾಗರೂಕತೆಯಿಂದ ಕೆಲಸ ಮಾಡಿ ಎಂದ ಆರ್ ಹಿತೇಂದ್ರ

ಸಮಾಜದಲ್ಲಿ ಪೊಲೀಸ್ ಇಲಾಖೆಗೆ ಮಹತ್ತರದ ಜವಾಬ್ದಾರಿ ಇದೆ! ಜಾಗರೂಕತೆಯಿಂದ ಕೆಲಸ ಮಾಡಿ ಎಂದ ಆರ್ ಹಿತೇಂದ್ರ

Hindu neighbor gifts plot of land

Hindu neighbour gifts land to Muslim journalist

ಪೊಲೀಸ್ ಇಲಾಖೆ ಬಹಳ ಶಿಸ್ತಿನ ಇಲಾಖೆ. ಬಹಳ ಜಾಗೂರಕತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಕೆಎಸ್‌ಆರ್‌ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್ ಹಿತೇಂದ್ರ ಕರೆ ನೀಡಿದರು. ಮಂಗಳವಾರ ನಗರದ ಕಂಗ್ರಾಳಿಯ ಕೆಎಸ್‌ಆರ್‌ಪಿ ಮೈದಾನದಲ್ಲಿ ಬೆಳಗಾವಿ 7 ನೇ ತಂಡ ಮತ್ತು ಹೆಚ್ಚುವರಿ ಪೊಲೀಸ್ ತರಬೇತಿ ಶಾಲೆ 10ನೇ ಪಡೆ ಶಿಗ್ಗಾವಿಯ 3ನೇ ತಂಡದ‌ ವಿಶೇಷ ಮೀಸಲು 344 ಪೊಲೀಸ್ ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ಪಥಸಂಚಲನದಲ್ಲಿ ಭಾಗಿಯಾಗಿ ಮಾತನಾಡಿದರು. ಪೊಲೀಸ್ ಇಲಾಖೆ ಬೇರೆ ಇಲಾಖೆಯ ರೀತಿ ಅಲ್ಲ. ಇದೊಂದು ಶಿಸ್ತಿನ ಇಲಾಖೆ. ಬಹಳಷ್ಟು ಜನರು ಸರಕಾರಿ ಕೆಲಸಕ್ಕೆ ಸೇರಬೇಕೆಂಬ ಬಯಕೆ ಇರುತ್ತದೆ. ಅಂತದರಲ್ಲಿ ನೀವು ಪೊಲೀಸ್ ಇಲಾಖೆಯಲ್ಲಿ ಸೇರ್ಪಡೆಯಾಗಿದ್ದೀರಿ ಜವಾಬ್ದಾರಿಯಿಂದ ಕೆಲಸ ಮಾಡಿ. ಪೊಲೀಸ್ ಇಲಾಖೆಯ ಕೆಲಸದ ಅವಧಿಯಲ್ಲಿ ಜಾತಿ, ಧರ್ಮ, ಪ್ರದೇಶದ ಆಧಾರದ ಮೇಲೆ ಕೆಲಸ ಮಾಡಬಾರದು. ಎಲ್ಲರೂ ಒಂದೇ ಎಂದು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.