Home ಬೆಂಗಳೂರು Bengaluru: ಹೈಪ್ರೊಫೈಲ್‌ ಹನಿಟ್ರ್ಯಾಪ್‌ ಪ್ರಕರಣ; ಮಾಸ್ಟರ್‌ ಮೈಂಡ್‌ ಯುವತಿ ಅರೆಸ್ಟ್‌!

Bengaluru: ಹೈಪ್ರೊಫೈಲ್‌ ಹನಿಟ್ರ್ಯಾಪ್‌ ಪ್ರಕರಣ; ಮಾಸ್ಟರ್‌ ಮೈಂಡ್‌ ಯುವತಿ ಅರೆಸ್ಟ್‌!

Bengaluru

Hindu neighbor gifts plot of land

Hindu neighbour gifts land to Muslim journalist

Bengaluru: ಹೈ ಪ್ರೊಫೈಲ್‌ ಹನಿಟ್ರಾಪ್‌ ಕೇಸ್‌ನ ( High Profile Honey Trap) ಮಾಸ್ಟರ್‌ ಮೈಂಡ್‌ ಸಿಕ್ಕಿಬಿದ್ದಿರುವ ಘಟನೆಯೊಂದು ನಡೆದಿದೆ. ಮಧ್ಯಪ್ರದೇಶದ ಅತಿದೊಡ್ಡ ಹನಿಟ್ರ್ಯಾಪ್‌ ಹಗರಣದ ರುವಾರಿಯಾದ ಆರತಿ ದಯಾಳ್‌ (Aarti Dayal) ಅವರನ್ನು ಬೆಂಗಳೂರಿನ( Bengaluru) ಮಹದೇವಪುರ ಪೊಲೀಸರು ಬಂಧಿಸಿರುವ ಕುರಿತು ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೇ ಬೆಂಗಳೂರಿನ ಪೊಲೀಸರು ಮಧ್ಯಪ್ರದೇಶದ ಪೊಲೀಸರಿಗೆ ಮಾಹಿತಿ ನೀಡಿರುವ ಕುರಿತು ವರದಿಯಾಗಿದೆ.

ಹೈಪ್ರೊಫೈಲ್‌ ಹನಿಟ್ರ್ಯಾಪ್‌ ಪ್ರಕರಣವೊಂದು 2019ರ ಮಧ್ಯಪ್ರದೇಶದಲ್ಲಿ ನಡೆದಿತ್ತು. ಈ ಪ್ರಕರಣದಲ್ಲಿ ಆರತಿ ಜೈಲು ಸೇರಿದ್ದು, 2020ರಲ್ಲಿ ಹೊರಗೆ ಬಂದವಳು ಆಮೇಲೆ ನಾಪತ್ತೆಯಾಗಿದ್ದಳು. ಈಕೆ ತನ್ನನ್ನು ಬೇರೆ ಬೇರೆ ಹೆಸರಿನಲ್ಲಿ ಹೇಳಿಕೊಂಡು ತಲೆಮರೆಸಿಕೊಂಡಿದ್ದಳು.

ಬಡ ಕುಟುಂಬದ ಹೆಣ್ಮಕ್ಕಳೇ ಇವಳ ಟಾರ್ಗೆಟ್‌ ಆಗಿತ್ತು. ಇವರಿಗೆಲ್ಲ ಐಷರಾಮಿ ಜೀವನದ ಆಸೆ ಹತ್ತಿಸಿ, ಹನಿಟ್ರ್ಯಾಪ್‌ಗೆ ಬಳಕೆ ಮಾಡುತ್ತಿದ್ದರು. ಈಕೆಯ ಜೊತೆ 40 ವೇಶ್ಯೆಯರನ್ನು ಬಾಡಿಗೆ ಆಧಾರದಲ್ಲಿ ಇಟ್ಟುಕೊಂಡಿರುವುದಾಗಿ ಕೂಡಾ ವರದಿಯಾಗಿದೆ. ಸರಕಾರದಲ್ಲಿ ಸಾಕಷ್ಟು ಮಟ್ಟಿಗೆ ಕಾಂಟಾಕ್ಟ್‌ ಹೊಂದಿದ್ದಳು ಈಕೆ.

ಇದನ್ನೂ ಓದಿ: Kerala High Court: ಒಂಟಿಯಾಗಿ ಅಶ್ಲೀಲ ವೀಡಿಯೋ ನೋಡುತ್ತೀರಾ? ಈ ಕುರಿತು ಹೈಕೋರ್ಟ್‌ ಏನು ಹೇಳಿದೆ ಗೊತ್ತೇ?