Home News ಹಲವು ತಿಂಗಳ ಹಿಂದೆ ನಾಲ್ವರು ಆತ್ಮಹತ್ಯೆಗೈದ ಬಂಗಲೆಯಲ್ಲಿ ದಿಢೀರನೆ ಕಾಣಿಸಿಕೊಂಡ ಬೆಳಕು| ದೆವ್ವ ಎಂದು ಭಯಭೀತರಾದ...

ಹಲವು ತಿಂಗಳ ಹಿಂದೆ ನಾಲ್ವರು ಆತ್ಮಹತ್ಯೆಗೈದ ಬಂಗಲೆಯಲ್ಲಿ ದಿಢೀರನೆ ಕಾಣಿಸಿಕೊಂಡ ಬೆಳಕು| ದೆವ್ವ ಎಂದು ಭಯಭೀತರಾದ ಜನ| ನಂತರ ಗೊತ್ತಾಗಿದ್ದೇ ಅಸಲಿಯತ್ತು!!!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರಿನಲ್ಲಿ ಹಲವು ತಿಂಗಳಿನ ಹಿಂದೆ, ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ದುರ್ಘಟನೆಯಲ್ಲಿ ಪುಟ್ಟ ಕಂದಮ್ಮ ಕೂಡಾ ಸಾವನ್ನಪ್ಪಿತ್ತು. ಈ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಈ ಘೋರ ಘಟನೆ ಬ್ಯಾಡರಳ್ಳಿಯಲ್ಲಿ ನಡೆದಿತ್ತು. ಈಗ ಈ ಮನೆಯ ಯಜಮಾನ ಜೈಲಿನಲ್ಲಿ ಇದ್ದಾರೆ‌. ಪರಿಣಾಮವಾಗಿ ಈ ಬಂಗಲೆ ಕಳೆದ ನಾಲ್ಕು ತಿಂಗಳಿನಿಂದ ಖಾಲಿ ಬಿದ್ದಿದೆ. ಕಳೆದ ನಾಲ್ಕು ತಿಂಗಳಿನಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ವಿದ್ಯುತ್ ಕಡಿತವಾಗಿದ್ದರಿಂದ ದೆವ್ವದ ಮನೆ ಎಂದೇ ಬಿಂಬಿತವಾಗಿತ್ತು. ಆದರೆ ನಿನ್ನೆ ಇದ್ದಕ್ಕಿದ್ದ ಹಾಗೆ ಮನೆಯಲ್ಲಿ ಬೆಳಕು ಕಂಡಿದೆ.ಸ್ಥಳಕ್ಕಾಗಮಿಸಿದ ಶಂಕರ್ ಎಂಬುವರು ಸ್ಥಳೀಯರ ಜೊತೆ ಮನೆಯೊಳಗೆ ಹೋಗಿದ್ದಾರೆ. ಜನರು ಒಳಗೆ ಬರುತ್ತಿದ್ದಂತೆ ಕಳ್ಳನೊಬ್ಬ‌ ದೆವ್ವ ಎಂದು ಅರಚಿಕೊಂಡು ಹೊರಗೆ ಬಂದಿದ್ದಾನೆ. ಕೂಡಲೇ ಸ್ಥಳೀಯರು ಕಳ್ಳನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಲವು ದಿನಗಳಿಂದ ಮನೆಗೆ ಬೀಗ ಹಾಕಿದ್ದರಿಂದ ಕಳ್ಳನೊಬ್ಬ ನುಗ್ಗಿದ್ದ. ಕಳ್ಳ ಟಾರ್ಚ್ ಹಿಡಿದು ಒಳಗೆ ಓಡಾಡುತ್ತಿರುವುದರಿಂದ ಬೆಳಕು ಕಂಡು ಸ್ಥಳೀಯರು ದೆವ್ವ ಏನೋ ಅಂದುಕೊಂಡು ಭಯಭೀತರಾಗಿದ್ದಾರೆ. ಆದರೆ ಜನರು ಒಳಗೆ ಹೋದಾಗ ಕಳ್ಳ ಟಾರ್ಚ್ ಹಿಡಿದುಕೊಂಡು ಒಳಗಡೆ ಓಡಾಡುವುದನ್ನು ನೋಡಿದ್ದಾರೆ. ಜನರನ್ನು ನೋಡಿದ ಕಳ್ಳ ದೆವ್ವ ಎಂದು ಕಿರುಚಿಕೊಂಡು ಮನೆಯಿಂದ ಹೊರಗೆ ಓಡಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ.