Home Karnataka State Politics Updates ಎಲ್ಲಾ ಖಾಸಗಿ ಬಸ್ ಪರವಾನಗಿ ರದ್ದು ಎಂದ ಸಾರಿಗೆ ಸಚಿವ ಶ್ರೀರಾಮುಲು !

ಎಲ್ಲಾ ಖಾಸಗಿ ಬಸ್ ಪರವಾನಗಿ ರದ್ದು ಎಂದ ಸಾರಿಗೆ ಸಚಿವ ಶ್ರೀರಾಮುಲು !

Hindu neighbor gifts plot of land

Hindu neighbour gifts land to Muslim journalist

ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಜನರ ಸಾವಾಗಿ, 25 ಜನರಿಗೆ ಗಾಯವಾಗಿದೆ. ಹಾಗಾಗಿ ಪಾವಗಡ ವ್ಯಾಪ್ತಿಯ ಎಲ್ಲ ಖಾಸಗಿ ಬಸ್ ಪರವಾನಗಿ ರದ್ದು ಮಾಡುತ್ತೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಅಲ್ಲಿನ ಬಸ್‌ಗಳಿಗೆ ಪರ್ಮಿಟ್ ಹಾಗೂ ಫಿಟೈಸ್ ಇದೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ.
ಓವರ್ ಲೊಡ್ ಮತ್ತು ಅತಿವೇಗ, ಹಾಗೂ ಟಾಪ್ ಮೇಲೆ ಜನರನ್ನು ಕೂರಿಸಿಕೊಂಡು ಬಂದದ್ದು ಘಟನೆಗೆ ಕಾರಣ ಎನ್ನಲಾಗಿದೆ.

ಈ ಭಾಗದಲ್ಲಿ ಖಾಸಗಿ ಬಸ್‌ಗಳಿಗೆ ಕಡಿವಾಣ ಹಾಕಿ ಸರ್ಕಾರಿ ಬಸ್ಸಿನ ವ್ಯವಸ್ಥೆ ಮಾಡುತ್ತೇವೆ ಎಂದು ಸಾರಿಗೆ ಸಚಿವರು ಹೇಳಿದ್ದಾರೆ.