Home ಬೆಂಗಳೂರು ‘ಬ್ಲೂ ಫಿಲಂ’ ನೋಡೋ‌ ಗೀಳು ಗಂಡನಿಗೆ! ಕೊನೆಗೆ ಹೆಂಡತಿಯೇ ನೀಲಿ ಚಿತ್ರದಲ್ಲಿ ನಟಿಸಿದ್ದಾಳೆಂದು ಸಂಶಯಗೊಂಡು ಬರ್ಬರವಾಗಿ...

‘ಬ್ಲೂ ಫಿಲಂ’ ನೋಡೋ‌ ಗೀಳು ಗಂಡನಿಗೆ! ಕೊನೆಗೆ ಹೆಂಡತಿಯೇ ನೀಲಿ ಚಿತ್ರದಲ್ಲಿ ನಟಿಸಿದ್ದಾಳೆಂದು ಸಂಶಯಗೊಂಡು ಬರ್ಬರವಾಗಿ ಹತ್ಯೆ ಮಾಡಿದ ಪಾಪಿ!!!

Hindu neighbor gifts plot of land

Hindu neighbour gifts land to Muslim journalist

ಅಶ್ಲೀಲ ಚಿತ್ರ ವೀಕ್ಷಿಸುವ ಚಟ ಕೊನೆಗೆ ತನ್ನ ಹೆಂಡತಿಯ ಚಟ್ಟ ಕಟ್ಟುವಲ್ಲಿಗೆ ಹೋಗಿದೆ ಈ ಘಟನೆ.

ಪತಿಗೆ ನೀಲಿ ಚಿತ್ರಗಳನ್ನು ವೀಕ್ಷಿಸುವ ಚಟ. ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿ ಕಡೆಗೆ ತನ್ನ ಪತ್ನಿಯೇ ನೀಲಿ ಚಿತ್ರದಲ್ಲಿ ನಟಿಸಿದ್ದಾಳೆಂದು ಸಂಶಯ ಪಟ್ಟು, ಮಕ್ಕಳ ಮುಂದೆಯೇ ಪತ್ನಿಯನ್ನು ಕೊಂದಿರುವ ಘಟನೆಯೊಂದು ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

ಆಟೋರಿಕ್ಷಾ ಚಾಲಕ 40ವರ್ಷದ ಜಹೀರ್ ಪಾಷಾ ಎಂಬಾತನೇ ಕೊಲೆ ಮಾಡಿದ ಆರೋಪಿ. ತನ್ನ ಪತ್ನಿ 35 ವರ್ಷದ ಮುಬೀನಾಳನ್ನು ಭಾನುವಾರದಂದು ತನ್ನ ಮಕ್ಕಳ ಮುಂದೆಯೇ ಇರಿದು ಕೊಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಹದಿನೈದು ವರ್ಷಗಳ ಹಿಂದೆ ಮುಬೀನಾಳನ್ನು ವಿವಾಹವಾಗಿದ್ದ ಜಹೀರ್ ಪಾಷಾ, ಆಕೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. 2 ತಿಂಗಳ ಹಿಂದೆ ಜಹೀರ್ ಪಾಷಾ ನೀಲಿ ಚಿತ್ರವೊಂದನ್ನು ವೀಕ್ಷಿಸಿದ್ದು, ಅದರಲ್ಲಿ ಮುಬೀನಾ ಹೋಲಿಕೆ ಇದ್ದವಳು ನಟಿಸಿದ್ದಳೆನ್ನಲಾಗಿದೆ.

ಅದು ತನ್ನ ಪತ್ನಿಯೇ ಎಂಬ ಅನುಮಾನದಲ್ಲಿ ಜಹೀರ್ ಪಾಷಾ ಕುಟುಂಬದ ಸಮಾರಂಭ ನಡೆಯುತ್ತಿದ್ದ ವೇಳೆ ಆಕೆ ಮೇಲೆ ಹಲ್ಲೆ ಮಾಡಿದ್ದನೆನ್ನಲಾಗಿದೆ. ಅಲ್ಲದೆ 20 ದಿನಗಳ ಹಿಂದೆ ಮುಬೀನಾಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಆ ಸಂದರ್ಭದಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಮುಬೀನಾಳ ತಂದೆ ಗೌಸ್ ಪಾಷಾ ಪೊಲೀಸರಿಗೆ ದೂರು ನೀಡಲು ಮುಂದಾದರೂ ಸಹ ಆಕೆಯೇ ತಂದೆಯನ್ನು ತಡೆದಿದ್ದಳು ಎನ್ನಲಾಗಿದೆ. ಭಾನುವಾರ ಪತಿ-ಪತ್ನಿ ನಡುವೆ ಮತ್ತೆ ಜಗಳ ಶುರುವಾಗಿದ್ದು ಈ ವೇಳೆ ಜಹೀರ್ ಪಾಷಾ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಇದನ್ನು ನೋಡಿ ಭಯಭೀತನಾದ ಆತನ ಮಗ ಸಮೀಪದಲ್ಲೇ ಇದ್ದ ಅಜ್ಜನ ಮನೆಗೆ ಹೋಗಿ ಮಾಹಿತಿ ನೀಡಿದ್ದಾನೆ. ದಂಪತಿಗೆ ಐವರು ಮಕ್ಕಳಿದ್ದು ಇದೀಗ ತಾಯಿ, ಸಾವನ್ನಪ್ಪಿದ್ದರೆ ತಂದೆ ಜೈಲು ಪಾಲಾಗಿದ್ದಾನೆ