Home ಬೆಂಗಳೂರು ರಾತ್ರಿ ವೇಳೆ ಬೊಗಳುತ್ತದೆ ಎಂದು ಅನ್ನದಲ್ಲಿ ವಿಷ ಹಾಕಿ ಇಟ್ಟ ದುರುಳರು | ...

ರಾತ್ರಿ ವೇಳೆ ಬೊಗಳುತ್ತದೆ ಎಂದು ಅನ್ನದಲ್ಲಿ ವಿಷ ಹಾಕಿ ಇಟ್ಟ ದುರುಳರು | ಅನ್ನ ತಿಂದ 10ಕ್ಕೂ ಹೆಚ್ಚು ನಾಯಿ ಸಾವು!!!

Hindu neighbor gifts plot of land

Hindu neighbour gifts land to Muslim journalist

ರಾತ್ರಿ ವೇಳೆ ಮನೆಯ ಬಳಿ ನಾಯಿಗಳು ಬೊಗಳುತ್ತವೆ ಎಂಬ ಕ್ಷುಲ್ಲಕ ಕಾರಣಕ್ಕೋಸ್ಕರ ವಿಷ ಮಿಶ್ರಿತ ಆಹಾರ ಕೊಟ್ಟು, 10 ಬೀದಿ ನಾಯಿಗಳನ್ನು ಹತ್ಯೆ ಮಾಡಿರುವಂತ ಅಮಾನವೀಯ ಘಟನೆಯೊಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಸಂದ್ರದ ಅಪಾರ್ಟ್ ಮೆಂಟ್ ಬಳಿ ಬೀದಿ ನಾಯಿಗಳು ಬೊಗಳುತ್ತವೆ ಎಂಬ ಒಂದೇ ಒಂದು ಕಾರಣದಿಂದ ಕಳೆದ ಶನಿವಾರ ರಾತ್ರಿ ವಿಷ ಮಿಶ್ರಿತ ಆಹಾರವನ್ನು ಬೆರೆಸಿ ಇಟ್ಟಿದ್ದು, ಹೀಗೆ ಇಟ್ಟಂತ ವಿಷ ಆಹಾರವನ್ನು ತಿಂದು, 10 ನಾಯಿಗಳು ಸಾವನ್ನಪ್ಪಿವೆ. ಇನ್ನೂ ಕೆಲ ನಾಯಿಗಳು ಅಸ್ವಸ್ಥಗೊಂಡು, ಸಾವು ಬದುಕಿನ ನಡುವೆ ಹೋರಾಡುತ್ತಿವೆ. ಅವುಗಳನ್ನು ಅನಿಮಲ್ ಅಸೋಷಿಯೇಷನ್ ಸದಸ್ಯರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಇದೀಗ ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದೂರು ಆಧರಿಸಿ, ನಾಯಿಗಳಿಗೆ ವಿಷಾಹಾರ ನೀಡಿ, ಹತ್ಯೆಗೈದಂತ ವ್ಯಕ್ತಿಗಳ ಪತ್ತೆಯಲ್ಲಿ ತೊಡಗಿದ್ದಾರೆ.