Home ಬೆಂಗಳೂರು ಭಯದ ವಾತಾವರಣ ಸೃಷ್ಟಿಸಿದ ಪುಡಿರೌಡಿಗಳ ಲಾಂಗ್ ಮಚ್ಚು ದಾಳಿ| ಭಯದಿಂದ ತತ್ತರಿಸಿರುವ ಕಾಲೇಜು ವಿದ್ಯಾರ್ಥಿಗಳು

ಭಯದ ವಾತಾವರಣ ಸೃಷ್ಟಿಸಿದ ಪುಡಿರೌಡಿಗಳ ಲಾಂಗ್ ಮಚ್ಚು ದಾಳಿ| ಭಯದಿಂದ ತತ್ತರಿಸಿರುವ ಕಾಲೇಜು ವಿದ್ಯಾರ್ಥಿಗಳು

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು, ಕಾಲೇಜಿಗೆ ಹೋಗುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಯದಲ್ಲೇ ಕಾಲೇಜಿಗೆ ಬರುವ ಘಟನೆಯೊಂದು ನಡೆದಿದೆ.

ಮಧ್ಯಾಹ್ನದ ಸಮಯದಲ್ಲಿ ಪುಡಿ ರೌಡಿಗಳು ಲಾಂಗ್ ಹಿಡಿದು ವಿದ್ಯಾರ್ಥಿಗಳನ್ನು ಅಟ್ಟಾಡಿಸಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದ ಘಟನೆಯೊಂದು ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ವಾಣಿ ವಿದ್ಯಾಸಂಸ್ಥೆ ಬಳಿ ನಡೆದಿದೆ. ಪುಡಿ ರೌಡಿಗಳ‌ಹಾವಳಿಗೆ ಸ್ಥಳೀಯರು ಸಹ ಬೆಚ್ಚಿಬಿದ್ದಿದೆ.

ಕೆಲವು ವಿದ್ಯಾರ್ಥಿಗಳು ಫ್ಯಾಕ್ಟರಿ ಶೆಡ್ ಸೇರಿದರೆ, ಅಲ್ಲಿಗೂ ನುಗ್ಗಿದ ರೌಡಿಗಳು, ವಿದ್ಯಾರ್ಥಿಗಳನ್ನು ಬೆದರಿಸಿದ್ದಾರೆ. ಒಂದೇ ದಿನ ಮೂರು ಕಡೆ ಸುಲಿಗೆ ಮಾಡಿದ್ದಾರೆ. ಈ ರೌಡಿಗಳ ಪುಂಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇವರ ದಾಳಿಗೆ ವಿದ್ಯಾರ್ಥಿಗಳು ಭಯದಿಂದ ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬೆನ್ನಲ್ಲೇ ಎಚ್ಚೆತ್ತ ಮಾದನಾಯಕನಹಳ್ಳಿ ಪೊಲೀಸರು ಪುಡಿ ರೌಡಿಗಳ ಹೆಡೆಮುರಿ ಕಟ್ಟಿದ್ದಾರೆ. ಪೊಲೀಸರು ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.