Home ಬೆಂಗಳೂರು ಇನ್ನೇನು ಬೆಂಗಳೂರು ತಲುಪಬೇಕು ಎಂದು ಹೊರಟಿದ್ದ ಮೂವರು ಗೆಳೆಯರ ದುರಂತ ಅಂತ್ಯ!!! ರೈಲು ತಡವಾಯಿತು-ಮೂವರ ಸಾವು...

ಇನ್ನೇನು ಬೆಂಗಳೂರು ತಲುಪಬೇಕು ಎಂದು ಹೊರಟಿದ್ದ ಮೂವರು ಗೆಳೆಯರ ದುರಂತ ಅಂತ್ಯ!!! ರೈಲು ತಡವಾಯಿತು-ಮೂವರ ಸಾವು ಖಚಿತವಾಯಿತು

Hindu neighbor gifts plot of land

Hindu neighbour gifts land to Muslim journalist

ಕೆರೆ ಬಳಿಗೆ ಪಾರ್ಟಿ ಮಾಡಲು ತೆರಳಿದ್ದ ಮೂವರು ಸ್ನೇಹಿತರು ತೆಪ್ಪ ಮಗುಚಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಉದ್ಯೋಗದ ನಿಮಿತ್ತ ಬೆಂಗಳೂರಿಗೆ ತೆರಳಲು ರೈಲು ನಿಲ್ದಾಣಕ್ಕೆ ಬಂದಿದ್ದಾಗ ರೈಲು ತಡವಾಗುತ್ತದೆ ಎಂಬ ಮಾಹಿತಿ ಬಂದಿದ್ದು,ಈ ಹಿನ್ನೆಲೆಯಲ್ಲಿ ಕೆರೆ ಬಳಿಗೆ ತೆರಳಿದ್ದ ವೇಳೆ ಘಟನೆ ನಡೆದಿದೆ.

ಕೋಲಾರದಿಂದ ಬೆಂಗಳೂರು ಕಡೆಗೆ ತೆರಳಬೇಕಿದ್ದ ಸ್ವರ್ಣ ಪ್ಯಾಸೆಂಜರ್ ರೈಲು ಸಿಗ್ನಲ್ ಸಮಸ್ಯೆಯಿಂದ ಟ್ರ್ಯಾಕ್ ಮೇಲೆಯೇ ನಿಂತಿದ್ದು, ಇದನ್ನು ತಿಳಿದ ಯುವಕರು ರೈಲು ತಡವಾಗುತ್ತದೆ ಎಂದು ತೆಪ್ಪ ಸವಾರಿಗೆ ಹೊರಟಿದ್ದರು.

ಕೆರೆ ಮಧ್ಯೆ ಮೂವರಿದ್ದ ತೆಪ್ಪ ಮಗುಚಿ ಬಿದ್ದ ಹಿನ್ನೆಲೆಯಲ್ಲಿ ಮೂವರೂ ಕೆರೆಯ ಆಳಕ್ಕೆ ಬಿದ್ದಿದ್ದು, ಶವ ಹುಡುಕಾಟ ಆರಂಭವಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ,ಹಾಗೂ ಕೆಲ ರಕ್ಷಣಾ ತಂಡ ಆಗಮಿಸಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.