Home ಬೆಂಗಳೂರು ಕೊಯನಾಡು ಸಮೀಪ ಬಿರುಕು ಬಿಟ್ಟ ರಸ್ತೆ!! ಮಂಗಳೂರು-ಬೆಂಗಳೂರು ತೆರಳುವ ವಾಹನಗಳ ಮಾರ್ಗ ರದ್ದು!! ಬದಲಿ ರಸ್ತೆ...

ಕೊಯನಾಡು ಸಮೀಪ ಬಿರುಕು ಬಿಟ್ಟ ರಸ್ತೆ!! ಮಂಗಳೂರು-ಬೆಂಗಳೂರು ತೆರಳುವ ವಾಹನಗಳ ಮಾರ್ಗ ರದ್ದು!! ಬದಲಿ ರಸ್ತೆ ಹೀಗಿದೆ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ಭಾರೀ ಮಳೆಯ ಕಾರಣದಿಂದಾಗಿ ಮಡಿಕೇರಿ ಸಂಪಾಜೆ ನಡುವಿನ ಕೋಯನಾಡು ಸಮೀಪ ರಸ್ತೆ ಬಿರುಕು ಬಿಟ್ಟಿರುವ ಕಾರಣ, ಮಂಗಳೂರು-ಬೆಂಗಳೂರು ನಡುವೆ ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಬಸ್ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ. ತಾತ್ಕಾಲಿಕವಾಗಿ ಘನ ವಾಹನ ಸಂಚಾರಕ್ಕೆ ಮಡಿಕೇರಿ ಮೂಲಕ ಅನುಮತಿ ಇಲ್ಲ.

ಈ ಹಿನ್ನೆಲೆ ಬೆಂಗಳೂರು ಮಂಗಳೂರು ನಡುವ ಸಂಚಾರ ನಡೆಸುವ ಬಸ್ ಗಳಿಗೆ ಹಾಸನ ಜಿಲ್ಲಾಧಿಕಾರಿ ಗಿರೀಶ್ ಅವರು ಪರ್ಯಾಯ ಮಾರ್ಗ ಸೂಚಿಸಿದ್ದಾರೆ, ಹಾಸನ ಜಿಲ್ಲೆಯ ಮಾರಣಹಳ್ಳಿಯಿಂದ ದೋಣಿ‌ಗಲ್ ಮೂಲಕ ಮಂಗಳೂರಿನತ್ತ ಸಂಚಾರ ನಡೆಸಲು ಅವಕಾಶ ಕಲ್ಪಿಸಿದ್ದಾರೆ. ಈ ಮಾರ್ಗದ ಮೂಲಕ ಖಾಸಗಿ ಸರ್ಕಾರಿ ಬಸ್ ಗಳು ರಾಜಹಂಸ, ಐರಾವತ, ಅಂಬಾರಿ, ಡ್ರೀಮ್ ಕ್ಲಾಸ್ ಸೂಪರ್, ನಾನ್ ಎಸಿ, ಸ್ಲೀಪರ್, ಸ್ಕ್ಯಾನಿಯಾ, ಮಲ್ಟಿ ಆಕ್ಸೆಲ್, ವೋಲ್ವೋ ಬಸ್ ಗಳು ಸಂಚಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸಂಜೆ 06:00 ರಿಂದ ಬೆಳಗ್ಗೆ 6.೦೦ ಗಂಟೆಯವರೆಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಆರ್ ಗಿರೀಶ್ ಆದೇಶ ಹೊರಡಿಸಿದ್ದಾರೆ.

ಮೇಲ್ಕಂಡ ವಾಹನಗಳು ಹಾಗೂ ತುರ್ತು ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳು ಬದಲಿ ರಸ್ತೆಯಲ್ಲಿ
ಸಂಚಾರಿಸುವಂತೆ ಸೂಚಿಸಲಾಗಿದೆ. ಮಳೆ ಹೆಚ್ಚಾದ ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆಯವರು ತಾತ್ಕಾಲಿಕವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲು ಸೂಕ್ತ ಕ್ರಮ ವಹಿಸಲು ಸೂಚಿಸಿದೆ.