Home ಬೆಂಗಳೂರು ಪ್ರಯಾಣಿಕರ ಆಕಾಶದಲ್ಲಿ ಹಾರುವ ಕನಸುಗಳಿಗೆ ರೆಕ್ಕೆ ನೀಡಲಿದೆ‌ ಗೋ ಫಸ್ಟ್ !! |ಬೆಂಗಳೂರಿನಿಂದ ದೇಶಾದ್ಯಂತ ವಿವಿಧ...

ಪ್ರಯಾಣಿಕರ ಆಕಾಶದಲ್ಲಿ ಹಾರುವ ಕನಸುಗಳಿಗೆ ರೆಕ್ಕೆ ನೀಡಲಿದೆ‌ ಗೋ ಫಸ್ಟ್ !! |ಬೆಂಗಳೂರಿನಿಂದ ದೇಶಾದ್ಯಂತ ವಿವಿಧ ಕಡೆಗಳಿಗೆ ವಿಮಾನದಲ್ಲಿ ಉಚಿತ ಪ್ರಯಾಣ !! | ಈ ಆಫರ್ ನಲ್ಲಿ ಉಚಿತ ಆಸನದ ಜೊತೆ ಉಚಿತ ಆಹಾರ

Hindu neighbor gifts plot of land

Hindu neighbour gifts land to Muslim journalist

ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಸದಾ ಭೂಮಿಯಲ್ಲಿ ಪ್ರಯಾಣಿಸುವ ಜನರಿಗೆ ಒಮ್ಮೆಯಾದರೂ ಆಕಾಶದಲ್ಲಿ ಹಾರಬೇಕೆಂಬುದು ಹಲವರ ಕನಸಾಗಿರುತ್ತದೆ. ಇಂತಹ ಕನಸು ನನಸಾಗುವ ಅವಕಾಶವೊಂದು ಇಲ್ಲಿದೆ.

ಕೊರೋನಾ ಸಾಂಕ್ರಾಮಿಕದ ನಂತರ ವಿಮಾನಯಾನ ಕಂಪನಿಗಳು ಸಾರ್ವಜನಿಕರನ್ನು ತನ್ನತ್ತ ಸೆಳೆಯಲು ಆಫರ್ ಗಳನ್ನು ನೀಡಲಾರಂಭಿಸಿವೆ. ಈ ಅನುಕ್ರಮದಲ್ಲಿ, ಗೋ ಫಸ್ಟ್ ಗ್ರಾಹಕರನ್ನು ಆಕರ್ಷಿಸಲು ಉಚಿತ ಪ್ರಯಾಣ ಮತ್ತು ಆಹಾರವನ್ನು ನೀಡುತ್ತಿದೆ. ಈ ಕೊಡುಗೆಯ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಖಾಸಗಿ ವಿಮಾನಯಾನ ಸಂಸ್ಥೆ ಗೋ ಫಸ್ಟ್ ಬೆಂಗಳೂರಿನಿಂದ ಆಯ್ದ ವಿಮಾನಗಳಲ್ಲಿ ‘ಉಚಿತ ಸೀಟುಗಳು ಮತ್ತು ಊಟ’ದ ಕೊಡುಗೆ ನೀಡುತ್ತಿದೆ. ನೀವು ಸಹ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ ಅಥವಾ ಬೆಂಗಳೂರಿನಿಂದ ಎಲ್ಲೋ ಹೋಗಲು ಯೋಜಿಸುತ್ತಿದ್ದರೆ, ಇದು ನಿಮಗೆ ಉತ್ತಮ ಕೊಡುಗೆಯಾಗಿದೆ. ಗೋ ಫಸ್ಟ್ ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ‘ಉಚಿತ ಆಸನಗಳು ಮತ್ತು ಉಚಿತ ಊಟ’ ಕೊಡುಗೆಯ ಕುರಿತು ವಿವರವಾದ ಮಾಹಿತಿಯನ್ನು ಪಡೆಯಬಹುದು.

ಟ್ವೀಟ್ ಮಾಡುವ ಮೂಲಕ ಗೋ ಫಸ್ಟ್ ಈ ಕೊಡುಗೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ಗೋ ಫಸ್ಟ್  , ‘ಯಾವುದು ಉತ್ತಮ? ಐಷಾರಾಮಿ ಪ್ರವಾಸ ಅಥವಾ ಉಚಿತ ಆಸನಗಳು ಮತ್ತು ಊಟ? ಸರಿ, ಎರಡೂ! #ಬೆಂಗಳೂರಿನಿಂದ ಆಯ್ದ ವಿಮಾನಗಳಲ್ಲಿ ಆಕರ್ಷಕ ಕೊಡುಗೆಗಳು’ ಎಂದು ಹೇಳಿದೆ.

ಆಫರ್ ಏನಿದೆ ಗೊತ್ತಾ?

ತನ್ನ ಕೊಡುಗೆಯ ಕುರಿತು ವಿವರವಾಗಿ ತಿಳಿಸಿರುವ ಗೋ ಫಸ್ಟ್ ಏರ್ಲೈನ್ಸ್, ‘ಬೆಂಗಳೂರಿನಿಂದ ದೇಶಾದ್ಯಂತ ವಿವಿಧ ಸ್ಥಳಗಳಿಗೆ ಹಾರುವ ಪ್ರಯಾಣಿಕರಿಗೆ ನಾವು ವಿಶೇಷ ಕೊಡುಗೆಗಳನ್ನು ಪರಿಚಯಿಸುತ್ತಿದ್ದೇವೆ! ಈಗ ಬೆಂಗಳೂರಿನಿಂದ ವಿಮಾನದಲ್ಲಿ ಐಷಾರಾಮಿ ಪ್ರಯಾಣವನ್ನು ಅನುಭವಿಸಿ. ಈ ವಿಶೇಷ ಕೊಡುಗೆಯ ಅಡಿಯಲ್ಲಿ, ಕಂಪನಿಯು ಬೆಂಗಳೂರಿನಿಂದ ಮುಂಬೈ, ದೆಹಲಿ, ರಾಂಚಿ, ವಾರಣಾಸಿ, ಕೋಲ್ಕತ್ತಾ, ಲಖನೌ ಮತ್ತು ಪುಣೆಗೆ ಹಾರುವ ಪ್ರಯಾಣಿಕರಿಗೆ ಉಚಿತ ಸೀಟುಗಳು ಮತ್ತು ಉಚಿತ ಆಹಾರವನ್ನು ನೀಡಲಿದೆ. 

ದೇಶದಲ್ಲಿ ದೇಶೀಯ ವಿಮಾನಗಳಲ್ಲಿ ಹಾರಾಟ ನಡೆಸುವ ಪ್ರಯಾಣಿಕರಿಗೆ ಅಗ್ಗದ ವಿಮಾನಗಳನ್ನು ಒದಗಿಸುವ ಏರ್‌ಲೈನ್ ಕಂಪನಿಯಾದ ಗೋ ಫಸ್ಟ್, ‘ಉಚಿತ ಆಸನ ಮತ್ತು ಉಚಿತ ಆಹಾರ’ ಕೊಡುಗೆಯ ವಿವರಗಳನ್ನು ತನ್ನ ವೆಬ್‌ಸೈಟ್ www.flygofirst.com ನಲ್ಲಿ ಹಂಚಿಕೊಂಡಿದೆ. ಈ ಕೊಡುಗೆಯು ಡಿಸೆಂಬರ್ 16 ರಿಂದ ಜನವರಿ 10, 2022 ರವರೆಗೆ ಮಾತ್ರ ಲಭ್ಯವಿದೆ . ವಾಸ್ತವದಲ್ಲಿ ಗೋ ಫಸ್ಟ್ ಏರ್‌ಲೈನ್ ಬೆಂಗಳೂರು ವಿಮಾನಗಳ ಪ್ರಚಾರಕ್ಕಾಗಿ ಮತ್ತು ಗ್ರಾಹಕರನ್ನು ಆಕರ್ಷಿಸಲು ಈ ವಿಶೇಷ ಕೊಡುಗೆಯನ್ನು ನೀಡುತ್ತಿದೆ.

ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ

ಈ ಕೊಡುಗೆಯನ್ನು ವರ್ಗಾಯಿಸಲಾಗುವುದಿಲ್ಲ ಎಂದು ಗೋ ಫಸ್ಟ್ ಏರ್‌ಲೈನ್ ಹೇಳಿದೆ. ಅಂದರೆ, ಒಮ್ಮೆ ನೀವು ಈ ಕೊಡುಗೆಯ ಅಡಿಯಲ್ಲಿ ಬುಕ್ ಮಾಡಿದ ನಂತರ, ಅದನ್ನು ಬೇರೆಯವರಿಗೆ ವರ್ಗಾಯಿಸುವ ಹಾಗಿಲ್ಲ. ಈ ಟಿಕೆಟ್ ಅನ್ನು ವರ್ಗಾಯಿಸಲಾಗುವುದಿಲ್ಲ ಅಥವಾ ಟಿಕೆಟ್ ರದ್ದುಗೊಳಿಸಿದಾಗ ಮರುಪಾವತಿ ನೀಡಲಾಗುವುದಿಲ್ಲ. ಯಾವುದೇ ರೀತಿಯ ಮಾಹಿತಿಗಾಗಿ ನೀವು ವೆಬ್‌ಸೈಟ್ ಗೆ ಭೇಟಿ ನೀಡಬಹುದು.