Home ದಕ್ಷಿಣ ಕನ್ನಡ ರಾಷ್ಟ್ರ ಪ್ರಶಸ್ತಿಯ ಗರಿಯಲ್ಲಿ ದ.ಕ ಜಿಲ್ಲಾ ಪಂಚಾಯತ್!! ಉತ್ತಮ ಕಾರ್ಯಾಚಟುವಟಿಕೆಗೆ ರಾಜ್ಯದಿಂದ ಆಯ್ಕೆ-ಏಪ್ರಿಲ್ 24ರಂದು ಮುಡಿಗೇರಲಿದೆ...

ರಾಷ್ಟ್ರ ಪ್ರಶಸ್ತಿಯ ಗರಿಯಲ್ಲಿ ದ.ಕ ಜಿಲ್ಲಾ ಪಂಚಾಯತ್!! ಉತ್ತಮ ಕಾರ್ಯಾಚಟುವಟಿಕೆಗೆ ರಾಜ್ಯದಿಂದ ಆಯ್ಕೆ-ಏಪ್ರಿಲ್ 24ರಂದು ಮುಡಿಗೇರಲಿದೆ ಪ್ರಶಸ್ತಿ!!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು:ಏಪ್ರಿಲ್ 24ರಂದು ರಾಷ್ಟೀಯ ಪಂಚಾಯತ್ ದಿನಾಚರಣೆ ಅಂಗವಾಗಿ ಪ್ರತೀ ವರ್ಷವೂ ಉತ್ತಮ ಕಾರ್ಯಚಟುವಟಿಕೆಯಲ್ಲಿರುವ ಒಂದು ರಾಜ್ಯದ ಒಂದು ಜಿಲ್ಲಾ ಪಂಚಾಯತ್ ನ್ನು ಗುರುತಿಸಿ ಕೊಡಲಾಗುವ ರಾಷ್ಟ್ರ ಪ್ರಶಸ್ತಿಗೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆಯ್ಕೆಯಾಗಿದೆ.

ಜಿಲ್ಲೆಯ ಕಾರ್ಯಕ್ಷಮತೆ, ಪ್ರಗತಿಗೆ ಆಧರಿಸಿ ಸರ್ಕಾರದಿಂದ ಕೊಡಮಾಡುವ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತಿಕರಣ್ ಪುರಸ್ಕಾರ 2022 ದಕ ಜಿಲ್ಲಾ ಪಂಚಾಯತ್ ಮುಡಿಗೇರಿದ್ದು,24ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಸ್ವಚ್ಛ ಭಾರತ್ ಅಭಿಯಾನ, ಕುಡಿಯುವ ನೀರಿನ ಯೋಜನೆ, ಗ್ರಂಥಾಲಯ ನಿರ್ವಹಣೆ-ನವೀಕರಣ, ಅಭಿವೃದ್ಧಿಗಾಗಿ ಬಳಸುವ ಅನುದಾನ ಮುಂತಾದವುಗಳನ್ನೆಲ್ಲಾ ಗಣನೆಗೆ ತೆಗೆದುಕೊಂಡು ಈ ಪ್ರಶಸ್ತಿಗೆ ಆಯ್ಕೆಮಾಡಲಾಗುತ್ತಿದ್ದು, ನಮ್ಮ ಜಿಲ್ಲಾ ಪಂಚಾಯತ್ ಉತ್ತಮ ಕಾರ್ಯನಿರ್ವಹಣೆ ಮಾಡಿರುವುದರಿಂದ ಈ ಬಾರಿ ಪ್ರಶಸ್ತಿ ಒದಗಿ ಬಂದಿದೆ ಎಂದು ಜಿಲ್ಲಾ ಪಂಚಾಯತ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕುಮಾರ್ ತಿಳಿಸಿದರು.