Home ದಕ್ಷಿಣ ಕನ್ನಡ Puttur: ಯುವತಿಯ ನಂಬಿಸಿ, ವಂಚನೆ ಮಾಡಿದ ಪ್ರಕರಣ: ಆರೋಪಿ ತಂದೆ ಆಸ್ಪತ್ರೆಗೆ ದಾಖಲು, ಪೊಲೀಸರಿಂದ ವಿಚಾರಣೆ

Puttur: ಯುವತಿಯ ನಂಬಿಸಿ, ವಂಚನೆ ಮಾಡಿದ ಪ್ರಕರಣ: ಆರೋಪಿ ತಂದೆ ಆಸ್ಪತ್ರೆಗೆ ದಾಖಲು, ಪೊಲೀಸರಿಂದ ವಿಚಾರಣೆ

Crime News Bangalore

Hindu neighbor gifts plot of land

Hindu neighbour gifts land to Muslim journalist

Puttur: ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿ ದೈಹಿಕ ಸಂಪರ್ಕ ಬೆಳೆಸಿ ಯುವತಿಯನ್ನು ಗರ್ಭವತಿಯನ್ನಾಗಿಸಿ ವಂಚನೆ ಮಾಡಿ ದ ಪ್ರಕರಣದ ಆರೋಪಿ ಶ್ರೀಕೃಷ್ಣ ಜೆ.ರಾವ್‌ ಇನ್ನೂ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದರ ಮಧ್ಯೆ ಆರೋಪಿಯ ತಂದೆ ಪಿ.ಜಿ.ಜಗನ್ನಿವಾಸ ರಾವ್‌ ಅಸ್ವಸ್ಥರಾಗಿ ಮಹಾವೀರ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಪೊಲೀಸ್‌ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ವೈದ್ಯರನ್ನು ವಿಚಾರಿಸಿ ಮಾಹಿತಿ ಪಡೆದುಕೊಂಡಿರುವ ಕುರಿತು ವರದಿಯಾಗಿದೆ.

ಸಂತ್ರಸ್ತೆಯ ತಾಯಿ, ಪಿಜಿ ಜಗನ್ನಿವಾಸ ಅವರು ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಪುತ್ತೂರು ಡಿವೈಎಸ್ಪಿ ಅರುಣ್‌ ನಾಗೇಗೌಡ ಅವರು ಆರೋಗ್ಯದ ಕುರಿತು ವೈದ್ಯರನ್ನು ಭೇಟಿ ಮಾಡಿ ವಿಚಾರಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Mohammed Shami: ಮೊಹಮ್ಮದ್ ಶಮಿಗೆ ನ್ಯಾಯಾಲಯದಿಂದ ದೊಡ್ಡ ಆಘಾತ, ಮಾಜಿ ಪತ್ನಿಗೆ ಪ್ರತಿ ತಿಂಗಳು 4 ಲಕ್ಷ ರೂ. ಪಾವತಿಸಲು ಆದೇಶ