Home ದಕ್ಷಿಣ ಕನ್ನಡ Kukke Subrahmanya: ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ನೇಮಕವಾಗಿರುವ ಯೇಸುರಾಜ್‌ ಯಾವ ಸಮುದಾಯದವರು?

Kukke Subrahmanya: ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ನೇಮಕವಾಗಿರುವ ಯೇಸುರಾಜ್‌ ಯಾವ ಸಮುದಾಯದವರು?

Kukke Subramanya

Hindu neighbor gifts plot of land

Hindu neighbour gifts land to Muslim journalist

Kukke Subramanya:  ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇತ್ತೀಚೆಗೆ ರಾಜ್ಯ ಸರಕಾರದಿಂದ ನೂತನ ಎಇಓ ನೇಮಕ ಮಾಡಲಾಗಿದ್ದು, ಇವರು ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದವರು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Astro Tips: ಒಂದೇ ಬಾರಿಗೆ 3 ಚಪಾತಿ ಅಥವಾ ರೊಟ್ಟಿಯನ್ನು ತಟ್ಟೆಗೆ ಹಾಕಿಕೊಳ್ಳಬಾರದು! ಕೆಟ್ಟದ್ದರ ಸಂಕೇತವಿದು

ಇವರ ಹೆಸರು ಯೇಸುರಾಜ್‌ ಎಂಬ ಕಾರಣದಿಂದ ಇವರು ಕ್ರಿಶ್ಚಿಯನ್‌ ಸಮುದಾಯವರು ಎಂಬ ಸುದ್ದಿ ಹರಿದಾಡುತ್ತಿದ್ದು, ಇದೀಗ ಈ ಸುಳ್ಳು ಸುದ್ದಿಗೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಸೋಶಿಯಲ್‌ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಅವರು ಹಿಂದು ಆಗಿದ್ದು, ಹಿಂದುಳಿದ ಜಾತಿಗೆ ಸೇರಿದವರಾಗಿದ್ದು, ದಾಖಲೆಗಳು ಇಲ್ಲಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Uttarpradesh: ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ವ್ಯಕ್ತಿ ಸಾವು; ಬ್ರೈನ್‌ ಸ್ಟ್ರೋಕ್‌ ಶಂಕೆ

ಯೇಸುರಾಜ್‌ ಅವರು ಕ್ರಿಶ್ಚಿಯನ್‌ ಎಂದು ಸುಳ್ಳು ಸುದ್ದಿ ಹಬ್ಬಿಸಿರುವ ಕುರಿತು ರಾಮಲಿಂಗ ರೆಡ್ಡಿ ಅವರು, ಇದು ಬಿಜೆಪಿ ಕರ್ನಾಟಕದ ಮತ್ತೊಂದು ಸುಳ್ಳು. ವಾಟ್ಸಪ್‌ ಫೇಕ್‌ ಯುನಿವರ್ಸಿಟಿ ಆಟವಾಗಿದೆ. ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ಹತ್ತಿರ ಇರುವ ಸಮಯದಲ್ಲಿ ಜನರ ದಾರಿ ತಪ್ಪಿಸಿ ಅವರ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಸೋಲಿನ ಭಯ ಶುರುವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಹರಿಹಾಯ್ದರು.