Home ದಕ್ಷಿಣ ಕನ್ನಡ ಉಪ್ಪಿನಂಗಡಿ :ಪಿಎಫ್ಐ ಪ್ರತಿಭಟನೆ, ಬಂದೋ ಬಸ್ತ್‌ನಲ್ಲಿದ್ದ ಬಂಟ್ವಾಳ ಎಸೈ ಪ್ರಸನ್ನ ಅವರಿಗೆ ಚೂರಿ ಇರಿತ

ಉಪ್ಪಿನಂಗಡಿ :ಪಿಎಫ್ಐ ಪ್ರತಿಭಟನೆ, ಬಂದೋ ಬಸ್ತ್‌ನಲ್ಲಿದ್ದ ಬಂಟ್ವಾಳ ಎಸೈ ಪ್ರಸನ್ನ ಅವರಿಗೆ ಚೂರಿ ಇರಿತ

Hindu neighbor gifts plot of land

Hindu neighbour gifts land to Muslim journalist

ಉಪ್ಪಿನಂಗಡಿಯಲ್ಲಿ ಇತ್ತೀಚಿಗೆ ನಡೆದ ಪ್ರಕರಣವೊಂದರಲ್ಲಿ ಪಿಎಫ್‌ಐ ಮುಖಂಡರನ್ನು ಬಂಧಿಸಿದ ಕಾರಣಕ್ಕಾಗಿ ಪಿ.ಎಫ್. ಐ.ಸಂಘಟನೆಯವರು ಪ್ರತಿಭಟನೆ ನಡೆಸಿದ್ದಲ್ಲದೆ ಠಾಣೆಗೆ ಮುತ್ತಿಗೆ ಹಾಕಲು ಮುಂದಾದಾಗ ಪೋಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.

ಇದೇ ವೇಳೆ ಠಾಣೆ ಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದ ಸಂದರ್ಭದಲ್ಲಿ ಬಂದೋಬಸ್ತ್ ಗಾಗಿ ತೆರಳಿದ ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಅವರಿಗೆ ಚೂರಿ ಇರಿದ ಘಟನೆ ನಡೆದಿದ್ದು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯಲ್ಲಿ ಪೋಲೀಸ್ ಇನ್ಸ್ ಪೆಕ್ಟರ್ ಉಮೇಶ್, ಮಹಿಳಾ ಎಸ್.ಐ ಓಮನ ಹಾಗೂ ಸಿಬ್ಬಂದಿ ಗಳ ಮೇಲೆ ಕಲ್ಲು ತೂರಾಟ ನಡೆಸಿ ಗಾಯಗೊಂಡಿದ್ದಾರೆ