Home ದಕ್ಷಿಣ ಕನ್ನಡ ಉಳ್ಳಾಲ:ನಿಗೂಢ ಸಾವನ್ನಪ್ಪಿದ ಗೃಹಿಣಿ-ಸಾವಿನ ಸುತ್ತ ಹಲವು ಅನುಮಾನ !!ದಂಪತಿಗಳ ಕಲಹಕ್ಕೆ ತಬ್ಬಲಿಯಾದ ಪುಟ್ಟ ಕಂದಮ್ಮ!!

ಉಳ್ಳಾಲ:ನಿಗೂಢ ಸಾವನ್ನಪ್ಪಿದ ಗೃಹಿಣಿ-ಸಾವಿನ ಸುತ್ತ ಹಲವು ಅನುಮಾನ !!ದಂಪತಿಗಳ ಕಲಹಕ್ಕೆ ತಬ್ಬಲಿಯಾದ ಪುಟ್ಟ ಕಂದಮ್ಮ!!

Hindu neighbor gifts plot of land

Hindu neighbour gifts land to Muslim journalist

ಗಂಡನ ಮನೆಯಲ್ಲಿದ್ದ ಗೃಹಿಣಿ ನಿಗೂಢ ಸಾವನ್ನಪ್ಪಿದ ಘಟನೆಯೊಂದು ಉಳ್ಳಾಲದ ಮುಕ್ಕಚೇರಿ ಎಂಬಲ್ಲಿ ಜುಲೈ 10ರ ಭಾನುವಾರ ಸಂಜೆ ನಡೆದಿದ್ದು, ಘಟನೆಯ ಬಳಿಕ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದೆ.

ಮೃತ ಮಹಿಳೆಯನ್ನು ಜಂಶೀರ(25) ಎಂದು ಗುರುತಿಸಲಾಗಿದ್ದು,ಕಳೆದ ಎರಡು ವರ್ಷಗಳ ಹಿಂದೆ ಮುಕ್ಕಚೇರಿ ನಿವಾಸಿ ಇರ್ಫಾನ್ ಜೊತೆ ವಿವಾಹವಾಗಿ ಎಂಟು ತಿಂಗಳ ಪುಟ್ಟ ಮಗುವಿದೆ.ಮದುವೆಯ ಬಳಿಕ ದಂಪತಿಗಳ ನಡುವೆ ಆಗಾಗ ಕಲಹಗಲು ನಡೆಯುತ್ತಿದ್ದು, ಪ್ರತೀ ಬಾರಿಯೂ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆಯುತ್ತಿತ್ತು ಎನ್ನಲಾಗಿದೆ.

ಘಟನೆ ನಡೆದ ದಿನವೂ ಪತಿ ಪತ್ನಿಯ ನಡುವೆ ಗದ್ದಲ ನಡೆದಿದ್ದು, ಅದಾಗಿ ಕೆಲ ಹೊತ್ತಿನಲ್ಲೇ ಮೃತ ಮಹಿಳೆಯ ಸಹೋದರಿಗೆ ಇರ್ಫಾನ್ ಮನೆಯಿಂದ ಕರೆಯೊಂದು ಬಂದಿದ್ದು, ಜಂಶೀರ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ ಆಕೆಯ ಉಳಿಸಿಕೊಳ್ಳಲಾಗಲಿಲ್ಲ ಎಂದಿದ್ದರಂತೆ.ಕೂಡಲೇ ಮಹಿಳೆಯ ಮನೆಮಂದಿ ಆಸ್ಪತ್ರೆಗೆ ಆಗಮಿಸಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಸದ್ಯ ಮೃತದೇಹವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಸಾವಿನ ಅಸಲಿಯತ್ತು ಬಯಲಾಗಲಿದ್ದು, ಕೊಲೆಯೆನ್ನುವ ಆರೋಪದ ಹಿನ್ನೆಲೆಯಲ್ಲಿ ಮೃತ ಮಹಿಳೆಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.