Home ದಕ್ಷಿಣ ಕನ್ನಡ ಮಂಗಳೂರಿನಲ್ಲಿ ಆ.12 ಉದ್ಯೋಗಮೇಳ | ಆಸಕ್ತರು ಭಾಗವಹಿಸಿ

ಮಂಗಳೂರಿನಲ್ಲಿ ಆ.12 ಉದ್ಯೋಗಮೇಳ | ಆಸಕ್ತರು ಭಾಗವಹಿಸಿ

Hindu neighbor gifts plot of land

Hindu neighbour gifts land to Muslim journalist

ಮಂಗಳೂರಲ್ಲಿ ಮತ್ತೊಂದು ಉದ್ಯೋಗಮೇಳ ನಡೆದಿದೆ. ಮಂಗಳೂರು ಸುತ್ತಮುತ್ತ ಇರುವ ಯುವಕ ಯುವತಿಯರು ಸದುಪಯೋಗ ಪಡೆದುಕೊಳ್ಳಬಹುದು.

ಯೆನೆಪೊಯ ಪದವಿ ಕಾಲೇಜು, ಮಂಗಳೂರು ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಂಗಳೂರು ಅವರ ಸಂಯುಕ್ತ ಆಶ್ರಯದಲ್ಲಿ ಖಾಸಗಿ ಕಂಪೆನಿಗಳಿಂದ ಬಲ್ಮಠದಲ್ಲಿರುವ ಯೆನೆಪೊಯ ಪದವಿ ಕಾಲೇಜಿನಲ್ಲಿ ಆ.12ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10ರಿಂದ ಅಪರಾಹ್ನ 3:30ರ ವರೆಗೆ ನಗರದ ಉದ್ಯೋಗ ಮೇಳ ನಡೆಯಲಿದೆ ಎಂದು ಯೆನೆಪೊಯ ಪದವಿ ಕಾಲೇಜು ಡೀನ್, ವೈಸ್ ಪ್ರಿನ್ಸಿಪಾಲ್ ಡಾ.ಶರೀನಾ ಪಿ. ಸುದ್ದಿಗೋಷ್ಠಿಯಲ್ಲಿಂದು ಹೇಳಿದ್ದಾರೆ.

ಉದ್ಯೋಗ ಮೇಳದಲ್ಲಿ ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಜಿ.ಎನ್.ಎಂ., ಎ.ಎನ್.ಎಂ., ಬಿ.ಎಸ್ಸಿ ನರ್ಸಿಂಗ್, ಬಿ.ಫಾರ್ಮಾ, ಎಂ.ಫಾರ್ಮಾ ಸೇರಿದಂತೆ ಯಾವುದೇ ಪದವಿ ಮತ್ತು ಸ್ನಾತಕೋತ್ತರ ಪದವಿ ತೇರ್ಗಡೆಯಾದ ಆಸಕ್ತ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಮೇಳದಲ್ಲಿ 30ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸಲಿದ್ದು, 800 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.