Home ದಕ್ಷಿಣ ಕನ್ನಡ ತುಳುನಾಡ ಕಾರ್ಣಿಕ ದೈವ ಕೊರಗಜ್ಜನಿಗೆ ಮತ್ತೊಮ್ಮೆ ಅವಮಾನ !! | ವಾಟ್ಸಾಪ್ ನಲ್ಲಿ ಅವಹೇಳನಕಾರಿ...

ತುಳುನಾಡ ಕಾರ್ಣಿಕ ದೈವ ಕೊರಗಜ್ಜನಿಗೆ ಮತ್ತೊಮ್ಮೆ ಅವಮಾನ !! | ವಾಟ್ಸಾಪ್ ನಲ್ಲಿ ಅವಹೇಳನಕಾರಿ ಪೋಸ್ಟ್ ಶೇರ್ ಮಾಡುವ ಮೂಲಕ ವಿಕೃತಿ ಮೆರೆದ ನೀಚ

Hindu neighbor gifts plot of land

Hindu neighbour gifts land to Muslim journalist

ಕರಾವಳಿ ಭಾಗದ ಭಕ್ತರು ಯಾವುದೇ ಕಷ್ಟ ಕಾರ್ಪಣ್ಯಗಳು ಎದುರಾದಾಗ ಕೊರಗಜ್ಜ ದೇವರಿಗೆ ಹರಕೆ ಹೊರುತ್ತಾರೆ. ತಮ್ಮ ಇಷ್ಟಾರ್ಥಗಳು ಈಡೇರಬೇಕೆಂದರೆ ಒಂದು ಬಾಟಲಿ ಎಣ್ಣೆ, ಚಕ್ಕುಲಿ ಮತ್ತು ಒಂದು ಕಟ್ಟು ಬೀಡಿಯನ್ನು ಕೊರಗಜ್ಜನಿಗೆ ಹರಕೆಯಾಗಿ ಸಲ್ಲಿಸುತ್ತಾರೆ. ಇಂತಹ ಕಾರ್ಣಿಕ ದೈವಕ್ಕೆ ಮತ್ತೊಮ್ಮೆ ಅವಮಾನ ಮಾಡಿರುವ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಆರಾಧ್ಯ ದೈವ ಕೊರಗಜ್ಜನನ್ನು ವಿಕೃತವಾಗಿ ಇಮೋಜಿಗಳನ್ನು ಶೇರ್ ಮಾಡಲಾಗಿದ್ದು, ಇದು ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದೆ. ಹಂಕರ ಜಾಲು ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಕೊರಗಜ್ಜನ ಬಗ್ಗೆ ಅವಹೇಳಕಾರಿಯಾಗಿ ಸ್ಟಿಕ್ಕರ್ ಮಾಡಿ ಪೋಸ್ಟ್ ಮಾಡಲಾಗಿದೆ.

ಜಾನ್ ಅಲೆನ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಕೊರಗಜ್ಜನ ಭಾವಚಿತ್ರವನ್ನು ಅಶ್ಲೀಲವಾದ ಫೊಟೋಗಳಿಗೆ ಅಂಟಿಸಿ ಅದನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ ವಿಕೃತಿ ಮೆರೆದಿದ್ದಾನೆ. +971582937680 ಸಂಖ್ಯೆಯಿಂದ ಈ ಆಶ್ಲೀಲ ಚಿತ್ರಗಳನ್ನು ಶೇರ್ ಮಾಡಿದ್ದಾನೆ.

ಈ ಚಿತ್ರ ಹಳೆಯದ್ದೋ ಅಥವಾ ಈಗಿನದ್ದೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸದ್ಯ ಈ ಸ್ಕ್ರೀನ್ ಶಾಟ್ ವಾಟ್ಸಪ್ ಗ್ರೂಪ್‌ಗಳಲ್ಲಿ ಶೇರ್ ಆಗಿ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಬಗ್ಗೆ ಭಾರೀ ವಿರೋಧ ಕೇಳಿಬಂದಿದ್ದು, ಆತನನ್ನು ಬಂಧಿಸುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಹಿಂದೆಯೂ ಮಂಗಳೂರಿನ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿಗೆ ಇದೇ ರೀತಿ ಅವಹೇಳನಕಾರಿ ಬರಹ, ಕಾಂಡೋಮ್ ಹಾಕಲಾಗಿತ್ತು. ಹೀಗೆ ವಿಕೃತಿ ಮೆರೆದವರಿಗೆ ಹಿಂದೆ ಕೊರಗಜ್ಜನೇ ಶಿಕ್ಷೆ ನೀಡಿದ್ದ. ಈ ಬಾರಿಯೂ ದೈವವೇ ಶಿಕ್ಷೆ ನೀಡುತ್ತದೆ ಎಂಬ ನಂಬಿಕೆ ಭಕ್ತ ಸಮೂಹದಲ್ಲಿ ಇರುವುದಂತೂ ಸತ್ಯ.