Home ದಕ್ಷಿಣ ಕನ್ನಡ Mangaluru : ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಪ್ರಾಣಬಿಟ್ಟ ಮೂವರು ಯುವತಿಯರು, ಕೊನೆ ಕ್ಷಣ ವಿಡಿಯೋ...

Mangaluru : ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಪ್ರಾಣಬಿಟ್ಟ ಮೂವರು ಯುವತಿಯರು, ಕೊನೆ ಕ್ಷಣ ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

Mangaluru: ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ಬಳಿಯ ಖಾಸಗಿ ಬೀಚ್ ರೆಸಾರ್ಟ್​ನಲ್ಲಿ ನಡೆದಿದೆ. ಇದೀಗ ಈ ಯುವತಿಯರ ಕೊನೆಯ ಕ್ಷಣದ ವಿಡಿಯೋ ವೈರಲ್ ಆಗುತ್ತಿದೆ.

ಹೌದು, ಮಂಗಳೂರಿನಲ್ಲಿ(Mangaluru )ಘೋರ ದುರಂತವೊಂದು ಸಂಭವಿಸಿದ್ದು, ಮೂವರು ಯುವತಿಯರು ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವತಿಯರನ್ನು ಮೈಸೂರು ಮೂಲದವರು ಎಂದು ಗುರುತಿಸಲಾಗಿದ್ದು, ಕುರುಬರಹಳ್ಳಿಯ ನಿವಾಸಿ ನಿಶಿತಾ ಎಂಡಿ (21), ವಿಜಯನಗರದ ದೇವರಾಜ ಮೊಹಲ್ಲಾದ ಪಾರ್ವತಿ (20), ಮೈಸೂರಿನ ಕೆ.ಆರ್. ಮೊಹಲ್ಲಾದ ಕೀರ್ತನಾ (20) ಎಂದು ಗುರುತಿಸಲಾಗಿದೆ. ಈ ಮೂವರು ಯುವತಿಯರು ಪ್ರಾಣ ಬಿಡುವ ಸಂದರ್ಭದಲ್ಲಿ ಕೊನೆ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

https://youtu.be/ChnnYaEfCf4?si=KbEvgRuQA5aQfuwv

ಇಂದು ಬೆಳಗ್ಗೆ 10 ಗಂಟೆಗೆ ಮೂವರು ಯುವತಿಯರು ರೆಸಾರ್ಟ್​ನ ಈಜುಕೊಳಕ್ಕಿಳಿದಿದ್ದಾರೆ. ಹೀಗೆ ಇಳಿದ ಮೂವರ ಪೈಕಿ ಒಬ್ಬಳು ಸ್ವಿಮ್ಮಿಂಗ್ ಪೂಲ್​ನಲ್ಲೇ ಇದ್ದ ಟ್ಯೂಬ್ ತರಲು ತೆರಳಿದ್ದಾಳೆ. ಆದ್ರೆ ಆಳ ಇದ್ದ ಕಾರಣ ಟ್ಯೂಬ್ ತಾರದೆ ವಾಪಸ್ ಆಗಿದ್ದಳು. ಹೀಗೆ ವಾಪಸ್ ಬಂದ ಯುವತಿ ತನ್ನಿಬ್ಬರು ಸ್ನೇಹಿತರಿದ್ದ ಕಡೆ ಬರ್ತಾಳೆ. ಆದ್ರೆ ಅದೇನಾಯ್ತೋ ಏನೋ ಮತ್ತೆ ಎಡಭಾಗದತ್ತ ಒಂದು ಹೆಜ್ಜೆ ಇಡ್ತಿದ್ದಂತೆ ಆಯತಪ್ಪಿದ್ದಾಳೆ. ಅಪಾಯವನ್ನು ಅರಿತ ಪಕ್ಕದಲ್ಲಿದ್ದ ಯುವತಿ ರಕ್ಷಣೆಗೆ ಧಾವಿಸಿದ್ದಾಳೆ. ತನ್ನ ಗೆಳತಿಯ ರಕ್ಷಣೆಗೆ ಅಂತಾ ಕೈಚಾಚಿದ ಎರಡನೇ ಯುವತಿ ಕೂಡಾ ನೋಡನೋಡ್ತಿದ್ದಂತೆ ಆಳಕ್ಕೆ ಜಾರಿಹೋಗ್ತಾಳೆ. ಹೀಗೆ ಓರ್ವ ಗೆಳತಿಯ ರಕ್ಷಣೆ ಹೋಗಿದ್ದ ಇಬ್ಬರು ಸೇರಿದಂತೆ ಮೂವರು ಯುವತಿ ದುರಂತ ಅಂತ್ಯಕಂಡಿದ್ದಾರೆ.