Home ದಕ್ಷಿಣ ಕನ್ನಡ Mangaluru : ಮೂರು ವರ್ಷದ ಪುಟಾಣಿ ಮಗುವಿಗೆ 70ರ ಮುದುಕನಿಂದ ಲೈಂಗಿಕ ಕಿರುಕುಳ !! ಕೊಣಾಜೆ...

Mangaluru : ಮೂರು ವರ್ಷದ ಪುಟಾಣಿ ಮಗುವಿಗೆ 70ರ ಮುದುಕನಿಂದ ಲೈಂಗಿಕ ಕಿರುಕುಳ !! ಕೊಣಾಜೆ ಪೊಲೀಸರ ಅತಿಥಿಯಾದ ಪಾಪಿ ಕಾಮುಕ

Hindu neighbor gifts plot of land

Hindu neighbour gifts land to Muslim journalist

Mangaluru : ಕಾಮುಕರ ಅಟ್ಟಹಾಸ ಎಲ್ಲೆಡೆ ಎಲ್ಲೆ ಮೀರಿದೆ. ಯುವಕರು ಮಾತ್ರವಲ್ಲ ವಯಸ್ಸಾಗಿ ಸಾಯುವ ಹಂತಕ್ಕೆ ಬಂದ ಮುದುಕರಿಗೂ ಕೂಡ ಅವರ ಕಾಮದ ದಾಹ ಇನ್ನು ತೀರಿಲ್ಲ ಎನಿಸುತ್ತದೆ. ಇದೀಗ ಇಂಥದ್ದೇ ಒಂದು ಅವಮಾನಕರ ಪ್ರಕರಣ ಒಂದು ಮಂಗಳೂರಿನಲ್ಲಿ(Mangaluru ) ಬೆಳಕಿಗೆ ಬಂದಿದ್ದು, ಈ ವಿಚಾರವನ್ನು ನಮಗೆ ಹೇಳಲು ಕೂಡ ನಾಚಿಕೆ ಎನಿಸುತ್ತದೆ.

ಹೌದು, ಮೂರು ವರ್ಷದ ಪುಟಾಣಿ ಹೆಣ್ಣು ಮಗುವಿಗೆ 70ರ ಪ್ರಾಯದ ಮುದುಕನೋರ್ವ ಲೈಂಗಿಕ ಕಿರುಕುಳ ನೀಡಿದ್ದಾನೆ. ಸದ್ಯ ಈ ಮುದುಕನ್ನು ಕೊಣಾಜೆ(Konaje) ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಮುದುಂಗಾರುಕಟ್ಟೆ ನಿವಾಸಿ ಅಬ್ದುಲ್ಲಾ (70) ಎಂದು ಗುರುತಿಸಲಾಗಿದೆ.

ಆರೋಪಿ ವ್ಯಕ್ತಿ ಅಡಿಕೆ ಖರೀದಿ ಅಂಗಡಿಯನ್ನು ಹೊಂದಿದ್ದು, ನವೆಂಬರ್ 21ರಂದು ಅಂಗಡಿ ಬಳಿಯಲ್ಲಿ ಆಟವಾಡುತ್ತಿದ್ದ ಹೆಣ್ಣು ಮಗುವಿಗೆ ಕಿರುಕುಳ ಕೊಟ್ಟಿದ್ದಾನೆಂದು ಆರೋಪಿಸಲಾಗಿದೆ. ಮಗು ಅಸಹಜವಾಗಿ ವರ್ತಿಸಿದ್ದರಿಂದ ಮಗುವಿನ ತಾಯಿ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಕೋಣಾಜೆ ಠಾಣೆಗೆ ತೆರಳಿ ಮಗುವಿನ ತಾಯಿ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆ ಮತ್ತು ಬಿಎನ್‌ಎಸ್ ಸೆಕ್ಷನ್ 65 ಪ್ರಕಾರ ಕೇಸು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.