Home ದಕ್ಷಿಣ ಕನ್ನಡ ಮಂಗಳೂರು : ಸಹ ಪ್ರಾಧ್ಯಾಪಕಿಯರಿಗೆ ಮಾನಸಿಕ ಕಿರುಕುಳ ಪ್ರಕರಣ| ಪೊಲೀಸ್ ವಿಚಾರಣೆಯಲ್ಲಿ ಆರೋಪಿಗಳಿಂದ ಆಘಾತಕಾರಿ ಮಾಹಿತಿ...

ಮಂಗಳೂರು : ಸಹ ಪ್ರಾಧ್ಯಾಪಕಿಯರಿಗೆ ಮಾನಸಿಕ ಕಿರುಕುಳ ಪ್ರಕರಣ| ಪೊಲೀಸ್ ವಿಚಾರಣೆಯಲ್ಲಿ ಆರೋಪಿಗಳಿಂದ ಆಘಾತಕಾರಿ ಮಾಹಿತಿ ಬಹಿರಂಗ!!!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ಪ್ರಾಧ್ಯಾಪಕಿಯೊಬ್ಬರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಮೂವರು ಆರೋಪಿಗಳು, ಸಂತ್ರಸ್ತ ಉಪನ್ಯಾಸಕಿಗೆ ಮಾತ್ರವಲ್ಲ ಇತರ ಕೆಲವು ಉಪನ್ಯಾಸಕಿ ಹಾಗೂ ವಿದ್ಯಾರ್ಥಿನಿಯರಿಗೆ, ಮಾನಸಿಕ ಕಿರುಕುಳ ನೀಡಿರುವ ಬಗ್ಗೆ ಮೂವರು ಆರೋಪಿಗಳು ಪೊಲೀಸ್ ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾರೆ.

ಪ್ರಾಧ್ಯಾಪಕಿಯ ಬಗ್ಗೆ ಅವಹೇಳನದ ಬಗ್ಗೆ ಬರೆದು ಪೋಸ್ಟರ್ ಅಂಟಿಸಿ ಮಾನಸಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಬಂಟ್ವಾಳದ ಆಡಳಿತ ಮಂಡಳಿಯ ಸಂಚಾಲಕನಿಗೆ ಜಾಮೀನು ಮಂಜೂರಾಗಿದ್ದರೆ. ಇತರ ಇಬ್ಬರಿಗೆ ಎರಡು ದಿನ ಪೊಲೀಸ್ ಕಸ್ಟಡಿ ನೀಡಲಾಗಿದೆ.

ಈ ಆರೋಪಿಗಳು ಕಾಲೇಜಿನಲ್ಲಿ ನಮ್ಮ ಮಾತುಗಳನ್ನು ಎಲ್ಲರೂ ಪಾಲಿಸಬೇಕು. ಇಲ್ಲದಿದ್ದರೆ ಯಾರಿಗೂ ಭವಿಷ್ಯವಿಲ್ಲ ಎಂಬಂತೆ ವರ್ತಿಸುತ್ತಿದ್ದರಂತೆ. ಈ ಹಿಂದೆಯೂ ಕೆಲವು ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರ ದಬ್ಬಾಳಿಕೆ ನಡೆಸಿರುವುದು ವಿಚಾರಣೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.