Home ದಕ್ಷಿಣ ಕನ್ನಡ ಪೋಷಕರೇ ಎಚ್ಚೆತ್ತುಕೊಳ್ಳಿ ನಾಳೆ ನಿಮ್ಮ ಮನೆ ಹೆಣ್ಣು ಮಕ್ಕಳಿಗೂ ಇದೇ ಸ್ಥಿತಿ ಮರುಕಳಿಸಬಹುದು | ಲೇಖನ...

ಪೋಷಕರೇ ಎಚ್ಚೆತ್ತುಕೊಳ್ಳಿ ನಾಳೆ ನಿಮ್ಮ ಮನೆ ಹೆಣ್ಣು ಮಕ್ಕಳಿಗೂ ಇದೇ ಸ್ಥಿತಿ ಮರುಕಳಿಸಬಹುದು | ಲೇಖನ : ?️ಪ್ರೇಮ ಪೊಳಲಿ

Hindu neighbor gifts plot of land

Hindu neighbour gifts land to Muslim journalist

ಹಿಂದೆಲ್ಲ ಎಲ್ಲೋ ದೂರದ ಉತ್ತರ ಭಾರತದ ಕಡೆಗಳಲ್ಲಿ ಮಾತ್ರ ಕೇಳಿ ಬರುತಿದ್ದ ರೇಪ್ ನಂತ ಭೀಭತ್ಸ ಕೃತ್ಯಗಳು ಈಗ ರಾಜ್ಯ, ಜಿಲ್ಲೆಯ ಗಡಿ ದಾಟಿ ನಮ್ಮಲ್ಲಿಗೆ ಬಂದು ನಿಂತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದಂತ ಪ್ರಕರಣ ನಮ್ಮ ಸಮೀಪದಲ್ಲೇ ನಡೆದಿದೆ.
ಏನು ಅರಿಯದ ಎಂಟು ವರುಷದ ಪುಟ್ಟ ಮಗುವೊಂದು ಕಾಮುಕರ ದುಷ್ಕೃತ್ಯಕ್ಕೆ ಬಲಿಯಾಗಿದೆ.

ಇವತ್ತು ಈ ನೀಚ ಕೃತ್ಯಕ್ಕೆ ಬಲಿಯಾಗಿರೋದು ಯಾವುದೋ ಹೊರ ರಾಜ್ಯದವರ ಮಗು ತಾನೇ ಅಂದುಕೊಂಡು ಸುಮ್ಮನೆ ಕೈಕಟ್ಟಿ ಕುಳಿತರೆ ನಾಳೆ ನಮ್ಮ ಮನೆಯ ಹೆಣ್ಣು ಮಕ್ಕಳಿಗೂ ಈ ಗತಿ ಬರಲು ಹೆಚ್ಚೆನೂ ಸಮಯ ಬೇಕಿಲ್ಲ.
ಹಾಗಾಗಿ ಇದು ನಮ್ಮಂತ ಹೆಣ್ಣು ಹೆತ್ತ ಎಲ್ಲಾ ಪೋಷಕರಿಗೂ ಎಚ್ಚರಿಕೆಯ ಕರೆಗಂಟೆಯೇ ಸರಿ.

ಏನು ಅರಿಯದ ಆ ಪುಟ್ಟ ಹುಡುಗಿಯ ಮೇಲೆ ರಾಕ್ಷಸರು ನಡೆಸಿದ ಪೈಶಾಚಿಕ ಕೃತ್ಯದಿಂದ ಆ ಮಗು ಎಂಥಾ ಘೋರ ಹಿಂಸೆ ಅನುಭವಿಸಿರಬಹುದು(ಪ್ರತಿಯೊಬ್ಬ ಹೆಣ್ಣಿಗೂ ಅರ್ಥವಾಗಬಹುದು) ಆ ಮಗು ಎಂಥ ನರಕ ಯಾತನೆಯನ್ನು ಅನುಭವಿಸಿರಬಹುದು ಯೋಚಿಸಿ ನೋಡಿ. ಒಂದುವೇಳೆ ಅದೇ ಹುಡುಗಿಯ ಸ್ಥಿತಿ ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಬಂದಿದ್ದರೆ?????

ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಆ ಜಾಗದಲ್ಲಿ ಊಹಿಸಿ ನೋಡೋದಕ್ಕು ಆಗ್ತಾ ಇಲ್ಲ ಅಲ್ವಾ.
ಹಾಗಾದ್ರೆ ಆ ಹೆಣ್ಣಿನ ಸ್ಥಿತಿ?

ಇದು ಎಲ್ಲಾ ಪೋಷಕರು ಯೋಚಿಸಬೇಕಾದ ಸಮಯ.
ಹೌದು ನಾವು ದಿನದ 24ಗಂಟೆಯೂ  ನಮ್ಮ ಮಕ್ಕಳ ಜೊತೆ ಇರಲು ಸಾಧ್ಯವಿಲ್ಲ. ಆದರೆ ಅಂತ ಸಮಯಕ್ಕೆ ಕಾದು ಕೂತು ಹಸುಗೂಸು, ಮಕ್ಕಳು ಅಂತಾನೂ ನೋಡದೆ ತಮ್ಮ ಕಾಮತೃಷೆಗಾಗಿ ಬಳಸಿಕೊಳ್ಳುವ ದುರುಳರು ನಮಗೆ ಗೊತ್ತಿಲ್ಲದೆ ನಮ್ಮ ಸುತ್ತ ಮುತ್ತಲೇ ಸಜ್ಜನರಂತೆ ಅಡಗಿ ಕುಳಿತಿರುವಾಗ ನಮ್ಮ ಮಕ್ಕಳಿಗೆ ರಕ್ಷಣೆ ಅನ್ನೋದು ಎಲ್ಲಿದೆ ಹೇಳಿ???

ದಯವಿಟ್ಟು ಎಲ್ಲಾ ಪೋಷಕರು  ಯೋಚಿಸಿ. ನಮ್ಮ ಮಕ್ಕಳು ಹೀಗೆ ಕಾಮುಕರ ಕಪಿಮುಷ್ಠಿಗೆ ಸಿಲುಕಿ ಯಾರೂ ನೋಡಲಾಗದ ಸ್ಥಿತಿಯಲ್ಲಿ ಸಿಲುಕಿ ಬೀದಿ ಹೆಣವಾಗಬೇಕೆ? ಅಥವಾ ನಮ್ಮ ಮಕ್ಕಳಿಗೆ ನೆಮ್ಮದಿಯ ನಾಳೆಗಳು ಬೇಕೆ?

ನಮ್ಮ ಮಕ್ಕಳಿಗೆ ಮುಂದೆ ಭಯವಿಲ್ಲದೇ ಬಾಳಬೇಕಾದ್ರೆ. ಈ ಕೃತ್ಯ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು. ಈ ಆರೋಪಿಗಳಿಗೆ ಆಗುವ ಶಿಕ್ಷೆ ನೋಡಿ ಮುಂದೆ ಯಾವನೂ ಕೂಡ ಹೆಣ್ಣು ಮಕ್ಕಳನ್ನು ಮುಟ್ಟೊದಿರಲಿ ಕೆಟ್ಟ ದೃಷ್ಟಿಯಲಿ ನೋಡೋದಕ್ಕೂ ಭಯ ಪಡುವಂತ ಘೋರ ಶಿಕ್ಷೆ ಈ ಪಾಪಿಗಳಿಗೆ ಆಗಬೇಕು.

ಒಂದು ವೇಳೆ ನಾವೇನಾದರೂ ಮಾಮೂಲಿಯಂತೆ ನಾಲ್ಕು ದಿನ ಸ್ಟೇಟಸ್ ಹಾಕಿ ಸುಮ್ಮನಾಗಿ ಬಿಟ್ರೆ. ಈ ಆರೋಪಿಗಳು ಹೇಗಾದ್ರೂ ಮಾಡಿ ತಪ್ಪಿಸಿಕೊಂಡು ಬಿಡುತ್ತಾರೆ,
ಈ ಆರೋಪಿಗಳು ತಪ್ಪಿಸಿಕೊಳ್ಳೋದು ಮಾತ್ರ ಅಲ್ಲ, ರೇಪ್ ಮಾಡಿದ್ರೆ ಏನು ಆಗಲ್ಲ ಹೇಗಾದ್ರೂ ತಪ್ಪಿಸಿಕೊಳ್ಳಬಹುದು ಅನ್ನುವ ಧೈರ್ಯದಿಂದ ಮುಂದೆ ಕಾಮುಕರ ಸಂಖ್ಯೆ ಬೆಳೆಯುತ್ತಾ ಹೋಗುತ್ತೆ. ಹೀಗೆ ಕಾಮುಕರು ಜಾಸ್ತಿಯಾದರೆ ಅದರ ನೇರ ಪರಿಣಾಮವಾಗುವುದು ನಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆಯೇ ತಾನೇ ???
ಹೀಗೆ ಪರೋಕ್ಷವಾಗಿ ಕಾಮುಕರನ್ನು ಬೆಳೆಸಿ ನಾಳೆ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಅವರ ಕಾಮ ತೃಷೆಗೆ ಬಲಿಯಾಗುವಂತೆ ಮಾಡಬೇಕಾ???
ಇಂದಿನ ನಮ್ಮ ಮೌನ ನಾಳೆ ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಕುತ್ತು ತರುತ್ತೆ  ಅನ್ನೊದನ್ನ ನೆನಪಿಟ್ಟುಕೊಳ್ಳಿ.

ಇನ್ನೂ ಪ್ರತಿಬಾರಿ ರೇಪ್ ಆದಾಗಲೂ ಹೆಣ್ಮಕ್ಕಳು ಹಾಕಿಕೊಳ್ಳುವ ಡ್ರೆಸ್ ನಿಂದಾಗಿಯೇ ರೇಪ್ ಆಗುತ್ತೆ ಅನ್ನುವ ಮೂರ್ಖರು ಇಂಥ ಪುಟ್ಟ ಮಕ್ಕಳ ಮೇಲಾಗುವ ಅತ್ಯಾಚಾರವನ್ನು ಹೇಗೆ ಸಮರ್ಥಿಸಿಕೊಳ್ತಿರಾ.?

ವಯಸ್ಸಾದವರು, ಅಮ್ಮನ ಸಮಾನರು, ಹರೆಯದ ಹೆಣ್ಮಕ್ಕಳು , ಕೊನೆಗೆ ಏನೂ ಅರಿಯದ ಇಂತ ಕಂದಮ್ಮಗಳ ಮೇಲೆಯೂ ನಿಮ್ಮ ಕಾಮ ದೃಷ್ಟಿ ಬೀಳುತ್ತೆ ಅಂದ್ರೆ ನಿಮ್ಮ ಕಾಮಕ್ಕೊಸ್ಕರ ಹೆಣ್ಣು ಯಾವ ರೂಪ, ಯಾವ ವಯಸ್ಸಿನಲ್ಲಿದ್ದರೂ ಅವಳನ್ನು ಬಿಡಲ್ಲ ಅಲ್ವಾ? ಥೂ ನಿಮ್ಮ ಜನ್ಮಕ್ಕಿಷ್ಟು.

ದಯವಿಟ್ಟು ಎಲ್ಲಾ ಪೋಷಕರು ಎಚ್ಚೆತ್ತುಕೊಳ್ಳಿ ನಮ್ಮ ನಾಡು, ನುಡಿ, ಧರ್ಮ, ಸಂಸ್ಕೃತಿ ಗಾಗಿ ಹೋರಾಡುವ ಅದೇಷ್ಟೋ ಧೀಮಂತ ನಾಯಕರು, ಸಂಘಟನೆಗಳು, ಕಾರ್ಯಕರ್ತರು, ನಮಗಾಗಿಯೇ ಇರುವ ಜನನಾಯಕರುಗಳು  ಎಲ್ಲರೂ ಒಂದಾಗೋಣ ಜಾತಿ, ಮತ, ಧರ್ಮ ಮರೆತು ನಮ್ಮ ಮನೆಯ ಹೆಣ್ಣು ಮಕ್ಕಳು ಸುಂದರ ನಾಳೆಗಾಗಿ ಹೋರಾಡೋಣ.
ಅತ್ಯಾಚಾರಿಗಳಿಗೆ ಕಠಿಣ ಕಾನೂನು ತರವಂತೆ ಸರ್ಕಾರವನ್ನು ಒತ್ತಾಯಿಸೋಣ.
ಕಾನೂನಿನಲ್ಲಿ ಅವಕಾಶ ಇಲ್ಲ ಅಂದ್ರೆ  ಇಂತಹ ಅತ್ಯಾಚಾರಿಗಳನ್ನು ಆ ಮಕ್ಕಳ ಹೆತ್ತವರ ಕೈಗೆ ಕೊಟ್ಟು ನೋಡಲಿ. ಮುಂದಕ್ಕೆ ಹೆಣ್ಣು ಮಕ್ಕಳ ತಂಟೆಗೆ ಬರೋದಕ್ಕೆ ಹೆದರುವಂತ ಘೋರ ಶಿಕ್ಷೆಯನ್ನು ಅವರೇ ನೀಡುತ್ತಾರೆ.

ಅಮ್ಮನ ಮಡಿಲಲ್ಲಿ ಜನಿಸಿ, ಅಕ್ಕ ತಂಗಿಯ ಜೊತೆ  ಬೆಳೆದು, ಸ್ನೇಹಿತೆ, ಹೆಂಡತಿ ಮಗಳನ್ನು ಪಡೆದಿರುವ ಮನುಷ್ಯತ್ವ ಇರುವ , ಆ ಪುಟ್ಟ ಕಂದಮ್ಮಳ ನೋವು ಅರ್ಥ ಆಗುವಂತ ಎಲ್ಲರೂ ಈ ಲೇಖನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಒತ್ತಾಯಿಸಿ, ಕೈ ಜೋಡಿಸಿ.

*ಯಾವಾಗ ಕೊಡುವಂತ ಶಿಕ್ಷೆಗಳು ಕ್ರೂರವಾಗುತ್ತೋ ಅವಾಗ ಮಾತ್ರ ಸಮಾಜದಲ್ಲಿ ಇಂತಹ ಹೇಯ ಕೃತ್ಯಗಳು ಕೊನೆಯಾಗುವುದು*

*?️ಪ್ರೇಮ ಪೊಳಲಿ?*