Home ದಕ್ಷಿಣ ಕನ್ನಡ ಪ್ರವೀಣ್ ನೆಟ್ಟಾರು ಮನೆಗೆ ಸಾಮಾಜಿಕ ಕಾರ್ಯಕರ್ತ ಸತ್ಯಜಿತ್‌ ಸುರತ್ಕಲ್ ಭೇಟಿ, ಸಾಂತ್ವನ

ಪ್ರವೀಣ್ ನೆಟ್ಟಾರು ಮನೆಗೆ ಸಾಮಾಜಿಕ ಕಾರ್ಯಕರ್ತ ಸತ್ಯಜಿತ್‌ ಸುರತ್ಕಲ್ ಭೇಟಿ, ಸಾಂತ್ವನ

Hindu neighbor gifts plot of land

Hindu neighbour gifts land to Muslim journalist

ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ನಂತರ ಅನೇಕ ಪ್ರತಿನಿಧಿಗಳು ಮನೆಗೆ ಬಂದು ಕುಟುಂಬಸ್ಥರಿಗೆಲ್ಲಾ ಸಮಾಧಾನದ ಮಾತನ್ನು ಹೇಳಿದ್ದಾರೆ.

ಇಂದು ಸಾಮಾಜಿಕ ಕಾರ್ಯಕರ್ತ ಸತ್ಯಜಿತ್ ಸುರತ್ಕಲ್ ಪ್ರವೀಣ್ ನೆಟ್ಟಾರು ಮನೆಗೆ ಬಂದಿದ್ದು, ಕುಟುಂಬಸ್ಥರಿಗೆಲ್ಲ ಸಾಂತ್ವನದ ನುಡಿಗಳನನ್ನು ಹೇಳಿದ್ದಾರೆ. ಮನೆಮಂದಿಯನ್ನು ಭೇಟಿಯಾದ ನಂತರ ಸತ್ಯಜಿತ್ ಸುರತ್ಕಲ್ ಅವರು ಸಿಟ್ಟಿನ ಭರದಲ್ಲಿ, ಕೋಪದಲ್ಲಿ ನಮ್ಮ ಬುದ್ಧಿಯನ್ನು ಕೊಡುವುದು ಬೇಡ. ಪ್ರತಿಯೊಂದು ಜೀವಗಳು ಅಮೂಲ್ಯವಾಗಿದೆ. ಹಾಗಾಗಿ ಸರಕಾರಕ್ಕೆ ಮತ್ತಷ್ಟು ಜವಾಬ್ದಾರಿ ಹೇರೋಣ. ಈ ಸರಕಾರಕ್ಕೆ ಜವಾಬ್ದಾರಿ ಇದೆ.‌ ಸರಕಾರ ತನ್ನ ಕರ್ತವ್ಯವನ್ನು ಯಾವ ರೀತಿ ನಿಭಾಯಿಸೋ ತನಕ ಮೊನ್ನೆ ಯಾವ ರೀತಿ ಜನರೆಲ್ಲ ಸೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೋ ಅದೇ ರೀತಿ ಬಿಸಿ ಮುಟ್ಟಿಸೋಣ ಹಾಗೂ ಸರಕಾರದಿಂದಲೇ ಈ ಕ್ರಮವನ್ನು ಮಾಡೋ ತನಕ ನಾವೆಲ್ಲರೂ ಒತ್ತಡವನ್ನು ಹಾಕಬೇಕಿದೆ. ನಾವೆಲ್ಲರೂ ಯಾರೂ ದಯವಿಟ್ಟು ನಾವ್ಯಾರೂ ಆಕ್ರೋಶವನ್ನು ಹೊರ ಹಾಕಬಾರದೆಂದು ಸಮಾಜದ ಜನರಲ್ಲಿ ನಾನು ವಿನಂತಿ ಮಾಡುತ್ತೇನೆ ಎಂದು ಸತ್ಯಜಿತ್‌ ಸುರತ್ಕಲ್ ಹೇಳಿದರು.