Home ದಕ್ಷಿಣ ಕನ್ನಡ ಪುತ್ತೂರು : ಹಾಡಹಗಲೇ ಉದ್ಯಮಿ ಮನೆಗೆ ನುಗ್ಗಿ ಹಣಕ್ಕಾಗಿ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳು!

ಪುತ್ತೂರು : ಹಾಡಹಗಲೇ ಉದ್ಯಮಿ ಮನೆಗೆ ನುಗ್ಗಿ ಹಣಕ್ಕಾಗಿ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳು!

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಹಾಡಹಗಲೇ ಉದ್ಯಮಿಯೊಬ್ಬರ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.

ನಿನ್ನೆ ಮಧ್ಯಾಹ್ನ ಹಿಂದಾರ್ ಭಾಸ್ಕರ್ ಆಚಾರ್ ಎಂಬವರ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಮರೀಲ್ ನ ವಿಜಯ ಶೇಣವ ಹಾಗೂ 6 ಜನರ ತಂಡ ನೀನು ನನಗೆ ದುಡ್ಡು ಕೊಡಲು ಬಾಕಿ ಇದೆ ಎಂದು ಒತ್ತಾಯ ಮಾಡಿ, ಇಲ್ಲದಿದ್ದರೆ ಅಪಹರಣ ಮಾಡುವುದಾಗಿ ಬೆದರಿಕೆ ಜೊತೆಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಹಿಂದಾರ್ ಭಾಸ್ಕರ್ ಆಚಾರ್ ಅವರು ನಾನು 18 ವರ್ಷಗಳ ಹಿಂದೆ ವಿಜಯ್ ಶೇಣವ ಎಂಬವರು ಮರೀಲ್ ನಲ್ಲಿ ನಿರ್ಮಿಸಿದ ಮನೆಯ ಕೆಲಸವನ್ನು ಮಾಡಿದ್ದೆ. ಆದರೆ ನಾನು ಯಾವುದೇ ರೀತಿಯ ಮೊತ್ತವನ್ನು ಅವರಿಗೆ ಬಾಕಿ ನೀಡಲು ಇರುವುದಿಲ್ಲ. ನನ್ನ ಹಾಗೂ ಅವರ ನಡುವೆ ಯಾವುದೇ ರೀತಿಯ ಹಣದ ವ್ಯವಹಾರವಿಲ್ಲ. ಏಕಾಏಕಿ ಮನೆಗೆ ನುಗ್ಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.