Home ದಕ್ಷಿಣ ಕನ್ನಡ ಪುತ್ತೂರು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಸಿದ್ದಿಕ್ ನೀರಾಜೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ ರೈ...

ಪುತ್ತೂರು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಸಿದ್ದಿಕ್ ನೀರಾಜೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ ರೈ ಆಯ್ಕೆ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಶಾಖೆಯ ಚುನಾವಣೆ ಡಿ.5ರಂದು ನಡೆಯಿತು. 23 ಸದಸ್ಯರು ಮತದಾರರಾಗಿದ್ದರು. ಶೇಖಡಾ 100 ಮತದಾನ ದಾಖಲಾಗಿತ್ತು.
ಅಧ್ಯಕ್ಷರಾಗಿ ಎ.ಸಿದ್ದಿಕ್ ನೀರಾಜೆ, ಉಪಾಧ್ಯಕ್ಷರಾಗಿ ಎಂ.ಎಸ್.ಭಟ್ ಹಾಗು ಕಿರಣ್ ಪ್ರಸಾದ್ ಕೆ, ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ ರೈ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಗಳಾಗಿ ಅಜಿತ್ ಕುಮಾರ್ ಕೆ ಹಾಗು ಕೆ.ಮೊಹಮ್ಮದ್ ನಝೀರ್, ಕೋಶಾಧಿಕಾರಿಯಾಗಿ ಸಂಶುದ್ದೀನ್ ಸಂಪ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಧಾಕರ ಕೆ., ಉಮಾಶಂಕರ, ಮೇಘ ಪಾಲೆತ್ತಾಡಿ, ಐ.ಬಿ.ಸಂದೀಪ್ ಕುಮಾರ್, ಶೇಷಪ್ಪ ಕಜೆಮಾರ್, ಕುಮಾರ್ ಕಲ್ಲಾರೆ, ಕೃಷ್ಣ ಪ್ರಸಾದ್, ಕರುಣಾಕರ ರೈ ಸಿ.ಎಚ್ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಎ.ಸಿದ್ದಿಕ್ ನೀರಾಜೆ ಒಬ್ಬರೇ ಕಣದಲ್ಲಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಎರಡು ಸ್ಥಾನಕ್ಕೆ ಎಂ.ಎಸ್.ಭಟ್ ಹಾಗು ಕಿರಣ್ ಪ್ರಸಾದ್ ಕೆ ಮಾತ್ರ ಕಣದಲ್ಲಿದ್ದ ಕಾರಣ ಅವಿರೋಧ ಆಯ್ಕೆ ನಡೆಯಿತು.

ಕಾರ್ಯದರ್ಶಿ ಎರಡು ಹುದ್ದೆಗೆ ಅಜಿತ್ ಕುಮಾರ್ ಕೆ ಹಾಗು ಕೆ.ಮೊಹಮ್ಮದ್ ನಝೀರ್ ಮಾತ್ರ ಕಣದಲ್ಲಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾದರು.

ಸಿದ್ದೀಕ್ ನೀರಾಜೆ

ಪ್ರಧಾನ ಕಾರ್ಯದರ್ಶಿ
ಪ್ರಧಾನ ಕಾರ್ಯದರ್ಶಿ ಒಂದು ಹುದ್ದೆಗೆ ಇಬ್ಬರು ಕಣದಲ್ಲಿದ್ದ ಕಾರಣ ಚುನಾವಣೆ ನಡೆಯಿತು. 13 ಮತ ಪಡೆದು ಶಶಿಧರ ರೈ ಆಯ್ಕೆಯಾದರು. ಲೋಕೇಶ್ ಬನ್ನೂರು 10 ಮತ ಪಡೆದರು.

ಸಂಶುದ್ದೀನ್ ಸಂಪ್ಯ

ಕೋಶಾಧಿಕಾರಿ
ಕೋಶಾಧಿಕಾರಿ ಒಂದು ಹುದ್ದೆಗೆ ಇಬ್ಬರು ಕಣದಲ್ಲಿ ಇದ್ದ ಕಾರಣ ಚುನಾವಣೆ ನಡೆಯಿತು.
15 ಮತ ಪಡೆದ ಸಂಶುದ್ದೀನ್ ಸಂಪ್ಯ ಆಯ್ಕೆಯಾದರು. ಶೇಖ್ ಜೈನುದ್ದೀನ್ 8 ಮತ ಪಡೆದರು.

ಕಾರ್ಯಕಾರಿ ಸಮಿತಿ
ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯಿತು. 8 ಹುದ್ದೆಗಳಿಗೆ 10 ಮಂದಿ ಕಣದಲ್ಲಿದ್ದರು.
ಸುಧಾಕರ ಕೆ.(21 ಮತ), ಉಮಾಶಂಕರ(19 ಮತ), ಮೇಘ ಪಾಲೆತ್ತಾಡಿ(17ಮತ), ಐ.ಬಿ.ಸಂದೀಪ್ ಕುಮಾರ್(16 ಮತ), ಶೇಷಪ್ಪ ಕಜೆಮಾರ್(15 ಮತ), ಕುಮಾರ್ ಕಲ್ಲಾರೆ(15 ಮತ) ಕೃಷ್ಣ ಪ್ರಸಾದ್,(12 ಮತ), ಕರುಣಾಕರ ರೈ ಸಿ.ಎಚ್(12ಮತ) ಆಯ್ಕೆಯಾಗಿದ್ದಾರೆ. ಕಣದಲ್ಲಿದ್ದ ಪ್ರವೀಣ್‌ಕುಮಾರ್ 11ಮತ, ಉಮಾಪ್ರಸಾದ್ ರೈ ನಡುಬೈಲು 10 ಮತ ಪಡೆದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ
ಚುನಾವಣಾಧಿಕಾರಿಯಾಗಿ,‌
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಉಪ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಚುನಾವಣಾ ಮೇಲುಸ್ತುವಾರಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ರವಿ‌ಕುಮಾರ್ ಆಗಮಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ್ದರು.