Home ದಕ್ಷಿಣ ಕನ್ನಡ ಪುತ್ತೂರು: ಹಣ ಹಿಂದಿರುಗಿಸದೇ ಮೋಸ- ಕೇಳಲು ಬಂದ ಮಹಿಳೆಗೆ ಹಲ್ಲೆ-ಕೊಲೆಯತ್ನ!! ನವೀನ್ ರೈ ಕೈಕಾರ ಹಾಗೂ...

ಪುತ್ತೂರು: ಹಣ ಹಿಂದಿರುಗಿಸದೇ ಮೋಸ- ಕೇಳಲು ಬಂದ ಮಹಿಳೆಗೆ ಹಲ್ಲೆ-ಕೊಲೆಯತ್ನ!! ನವೀನ್ ರೈ ಕೈಕಾರ ಹಾಗೂ ಆತನ ಪತ್ನಿ ವಿರುದ್ಧ ದೂರು ದಾಖಲು

Hindu neighbor gifts plot of land

Hindu neighbour gifts land to Muslim journalist

ಹಣದ ವಿಚಾರದಲ್ಲಿ ಗಲಾಟೆ ಸಂಭವಿಸಿ ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಪುತ್ತೂರು ಕೈಕಾರ ನಿವಾಸಿ ನವೀನ್ ರೈ ಹಾಗೂ ಆತನ ಪತ್ನಿಯ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು,
ಹಲ್ಲೆಯಿಂದ ಗಾಯಗೊಂಡ ದೂರುದಾರೆಯನ್ನು ದಾರಂದಕುಕ್ಕು ನಿವಾಸಿ ಸುಮಂಗಲ ಶೆಣೈ ಎಂದು ಗುರುತಿಸಲಾಗಿದೆ.

ಘಟನೆ ವಿವರ:ದೂರುದಾರೆ ಸುಮಂಗಲ ಶೆಣೈ ಹಾಗೂ ಆರೋಪಿ ನವೀನ್ ರೈ ಜೊತೆಯಾಗಿಯೇ ಕೆಲಸ ಮಾಡುತ್ತಿದ್ದೂ, ಫುಡ್ ಸೇಫ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು.

ಈ ನಡುವೆ ಆರೋಪಿ ನವೀನ್ ರೈ ಸುಮಂಗಲ ಶೆಣೈ ಅವರಿಂದ ಸುಮಾರು ಎರಡು ಲಕ್ಷ ಹಣ ಪಡೆದುಕೊಂಡು ಹಿಂದಿರುಗಿಸದೆ ಮೋಸ ಮಾಡಿದ್ದ ಎನ್ನಲಾಗಿದ್ದು,ಇದೇ ವಿಚಾರವಾಗಿ ಹಣವನ್ನು ಹಿಂಪಡೆಯುವ ನಿಟ್ಟಿನಲ್ಲಿ ನವೀನ್ ರೈ ಮನೆಗೆ ತೆರಳಿದ್ದಾಗ ಸುಮಂಗಲ ಶೆಣೈ ಅವರ ಮೇಲೆ ನವೀನ್ ರೈ ಹಾಗೂ ಆತನ ಪತ್ನಿ ಹಲ್ಲೆ ನಡೆಸಿ, ಇಸ್ತ್ರಿ ಪೆಟ್ಟಿಗೆಯಲ್ಲಿ ಸುಟ್ಟು ಕ್ರೂರತ್ವ ಮೆರೆದಿದ್ದರು. ಈ ಬಗ್ಗೆ ಗಾಯಳು ಮಹಿಳೆ ಸುಮಂಗಲ ಶೆಣೈ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ನೀಡಿದ ದೂರನಂತೆ ಆರೋಪಿಗಳ ವಿರುದ್ಧ ಠಾಣಾ ಅ.ಕ್ರ:73/2022 ಕಲಂ:324,354(A),323,504,506 r/w 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.