Home ದಕ್ಷಿಣ ಕನ್ನಡ ಪುಂಜಾಲಕಟ್ಟೆ : ಅಂಗಡಿಯಲ್ಲಿ ಮಟ್ಕಾ ಅಡ್ಡೆ ,ಎಎಸ್ಪಿ ನೇತೃತ್ವದಲ್ಲಿ ದಾಳಿ,ಇಬ್ಬರ ಬಂಧನ

ಪುಂಜಾಲಕಟ್ಟೆ : ಅಂಗಡಿಯಲ್ಲಿ ಮಟ್ಕಾ ಅಡ್ಡೆ ,ಎಎಸ್ಪಿ ನೇತೃತ್ವದಲ್ಲಿ ದಾಳಿ,ಇಬ್ಬರ ಬಂಧನ

Hindu neighbor gifts plot of land

Hindu neighbour gifts land to Muslim journalist

ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ಜಂಕ್ಷನ್ ನಲ್ಲಿರುವ ವಿಶ್ವನಾಥ್ ಮಾಲಕತ್ವದ ಅಂಗಡಿಯೊಳಗೆ ಅನೇಕ ಸಮಯಗಳಿಂದ ಅಕ್ರಮವಾಗಿ ಮಟ್ಕಾ ಅಡ್ಡೆ ನಡೆಯುತ್ತಿದ್ದ ಬಗ್ಗೆ ವ್ಯಾಪಾಕ ದೂರು ಬಂದ ಹಿನ್ನಲೆಯಲ್ಲಿ ಬಂಟ್ವಾಳ ಎಎಸ್ಪಿ ಹಿಮಾಂಶು ರಾಜಪೂತ್ ಮತ್ತು ತಂಡ ಇಂದು ಸಂಜೆ ವೇಳೆ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಅಂಗಡಿ ಮಾಲಕ ವಿಶ್ವನಾಥ್ ಮತ್ತು ಏಜೆಂಟ್ ಶ್ರೀಧರ್ ಎಂಬವರನ್ನು ಬಂಧಿಸಿದ್ದು ಯೋಗೀಶ್ ಎಂಬಾತ ಪರಾರಿಯಾಗಿದ್ದಾನೆ ,4,500/- ಹಣ, ಮೂರು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.