Home ದಕ್ಷಿಣ ಕನ್ನಡ Puttur: ಪುತ್ತೂರು ಮಹಾಲಿಂಗೇಶ್ವರ ಬ್ರಹ್ಮರಥೋತ್ಸವದಂದು 50 ಸಾವಿರ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆಗೆ ಸಿದ್ಧತೆ

Puttur: ಪುತ್ತೂರು ಮಹಾಲಿಂಗೇಶ್ವರ ಬ್ರಹ್ಮರಥೋತ್ಸವದಂದು 50 ಸಾವಿರ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆಗೆ ಸಿದ್ಧತೆ

Hindu neighbor gifts plot of land

Hindu neighbour gifts land to Muslim journalist

Puttur: ಇತಿಹಾಸ ಪ್ರಸಿದ್ಧ ಪುತ್ತೂರು (puttur) ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ, ಅನ್ನದ ಅಗಳು ಮುತ್ತಾದ ಐತಿಹ್ಯವುಳ್ಳ ಕೆರೆಯ ಬಳಿಯೇ ಈ ಬಾರಿ ಜಾತ್ರಾ ಸಂಭ್ರಮದ ಅನ್ನಪ್ರಸಾದ ವಿತರಣೆಯಾಗಲಿದೆ.

ಕೆರೆಯ ಬಳಿಯ 20 ಸಾವಿರ ಚದರ ಅಡಿಯಲ್ಲಿರುವ ಅನ್ನಪೂರ್ಣ ಭೋಜನ ಮಂಟಪದಲ್ಲಿ ನಿತ್ಯ ಅನ್ನಪ್ರಸಾದ ವಿತರಣೆ ನಡೆದಿದ್ದು, ಜಾತ್ರೆ ಆರಂಭವಾದಂದಿನಿಂದ 6 ದಿನದಲ್ಲಿ ಸುಮಾರು 50 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಈಗಾಗಲೇ ಅನ್ನಪ್ರಸಾದ ವಿತರಣೆ ನಡೆದಿದೆ. ಏ.16 ಮತ್ತು 17ರಂದು ಇನ್ನಷ್ಟು ಹೆಚ್ಚಿನ ಭಕ್ತರು ಅನ್ನಪ್ರಸಾದ ಸ್ವೀಕರಿಸಲಿದ್ದಾರೆ. ಮುಖ್ಯವಾಗಿ ಬ್ರಹ್ಮರಥೋತ್ಸವದಂದು ಲಕ್ಷಾಂತರ ಮಂದಿ ಭಕ್ತರು ಬರಲಿದ್ದಾರೆ. ಮಧ್ಯಾಹ್ನದ ವೇಳೆ ಸುಮಾರು 50 ಸಾವಿರ ಮಂದಿ ಭಕ್ತರಿಗೆ ಅನ್ನಪ್ರಸಾದ ವಿತರಣೆಗೆ ಈಗಾಗಲೇ ಸಿದ್ಧತೆ ನಡೆದಿದೆ. ಎ.16ರ ರಾತ್ರಿಯೇ ಅನ್ನಪ್ರಸಾದ ಪಲ್ಲಪೂಜೆಗೆ ದೊಡ್ಡ ರೀತಿಯಲ್ಲಿ ಕದಿಕೆ ಕಟ್ಟಲಾಗುತ್ತದೆ ಎಂದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ತಿಳಿಸಿದ್ದಾರೆ.

ಅದೇ ರೀತಿ ಏ.14ರಂದು ಶಾಸಕರು ಅನ್ನಪ್ರಸಾದ ಸ್ವೀಕರಿಸಿ ಬಳಿಕ ತಾನೂ ಭಕ್ತರಿಗೆ ಅನ್ನಪ್ರಸಾದ ವಿತರಣೆ ಮಾಡಿದ್ದಾರೆ. ಜೊತೆಗೆ ಭಕ್ತರಿಗಾಗಿ ಅಳವಡಿಸಿರುವ ಸ್ಟ್ಯಾಂಡಿಂಗ್ ಫ್ಯಾನ್‌ನ ಗಾಳಿ ಸಾಕಾಗದೇ ಇರುವುದನ್ನು ಗಮನಿಸಿ ತಕ್ಷಣ ಸೀಲಿಂಗ್ ಫ್ಯಾನ್ ಅಳವಡಿಸಲು ತಿಳಿಸಿದ್ದರು. ಅವರು” ಸೂಚಿಸಿದ ಮರುದಿನವೇ ಅನ್ನಪೂರ್ಣ ಭೋಜನ ಮಂಟಪಕ್ಕೆ ಎರಡು ಜಂಬೋಫ್ಯಾನ್ ಅಳವಡಿಸಲಾಗಿದೆ. ಜೊತೆಗೆ ಹೆಚ್ಚುವರಿ ಅನ್ನಪ್ರಸಾದ ವಿತರಣೆಯ ಕೌಂಟರ್ ತೆರೆಯಲಾಗಿದೆ. ಜೊತೆಗೆ ಸರಕಾರಿ ನೌಕರರಿಗೆ, ಕಚೇರಿ ಸಿಬ್ಬಂದಿಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಪ್ರತ್ಯೇಕವಾಗಿ, ಕುಳಿತು ಅನ್ನಪ್ರಸಾದ ಸ್ವೀಕರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.