Home ದಕ್ಷಿಣ ಕನ್ನಡ ಬಂಟ್ವಾಳ: ವಿದ್ಯುತ್ ಶಾಕ್ ಗೆ ನವಿಲು ಬಲಿ| ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ

ಬಂಟ್ವಾಳ: ವಿದ್ಯುತ್ ಶಾಕ್ ಗೆ ನವಿಲು ಬಲಿ| ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ

Hindu neighbor gifts plot of land

Hindu neighbour gifts land to Muslim journalist

ಬಂಟ್ವಾಳ : ತಾಲೂಕಿನ ಜಕ್ರಿಬೆಟ್ಟುವಿನಿಂದ ಅಗ್ರಾರ್ ಸಾಗುವ ದಾರಿಯ ಒಳರಸ್ತೆಯ ಮಧ್ಯೆ ನವಿಲೊಂದರ ಮೃತದೇಹ ಪತ್ತೆಯಾಗಿದ್ದು, ವಿದ್ಯುತ್ ಶಾಕ್ ಹೊಡೆದು ನವಿಲು ಮೃತಪಟ್ಟಿರುವುದಾಗಿ ಬಂಟ್ವಾಳ ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಸತ್ತಿರುವ ನವಿಲು ಪತ್ತೆಯಾಗಿರುವ ಕುರಿತು ಅರಣ್ಯ ಇಲಾಖೆಗೆ ಬಂದ ಮಾಹಿತಿಯಂತೆ ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ರಕ್ಷಕಿ ಸ್ಮಿತಾ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಅನಂತರ ನವಿಲಿನ ಮೃತದೇಹವನ್ನು ಇಲಾಖೆ ನಿಯಮಾವಳಿಯಂತೆ ದಹನ ಕಾರ್ಯ ನಡೆಸಲಾಗಿದೆ. ನವಿಲಿನ ಮೃತದೇಹ ಪತ್ತೆಯಾಗಿರುವ ರಸ್ತೆಯ ಮೇಲ್ಭಾಗದಲ್ಲೇ‌ ವಿದ್ಯುತ್ ಲೈನ್ ಹಾದು ಹೋಗಿದ್ದು, ಹೀಗಾಗಿ ವಿದ್ಯುತ್ ಶಾಕ್ ನಿಂದ ಸತ್ತಿರುವುದು ಖಚಿತಗೊಂಡಿದೆ.

ಜೊತೆಗೆ ಮೃತದೇಹ ಕೊಳೆತಿರುವ ಕಾರಣದಿಂದ ಮರಣೋತ್ತರ ಪರೀಕ್ಷೆ ನಡೆಸುವುದು ಸಾಧ್ಯವಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.