Home ದಕ್ಷಿಣ ಕನ್ನಡ ಮುಕ್ಕೂರು : ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ| ಸುಬ್ರಾಯ ಭಟ್ ನೀರ್ಕಜೆ,...

ಮುಕ್ಕೂರು : ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ| ಸುಬ್ರಾಯ ಭಟ್ ನೀರ್ಕಜೆ, ಕುಂಬ್ರ ದಯಾಕರ ಆಳ್ವ,ಗುಡ್ಡಪ್ಪ ಗೌಡ ಸಹಿತ 13 ಮಂದಿ ನಾಮಪತ್ರ ಸಲ್ಲಿಕೆ- ಮೇ 8 ಕ್ಕೆ ನಾಮಪತ್ರ ಪರಿಶೀಲನೆ

Hindu neighbor gifts plot of land

Hindu neighbour gifts land to Muslim journalist

ಮುಕ್ಕೂರು : ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಶನಿವಾರ ನಾಮಪತ್ರ ಸಲ್ಲಿಕೆ ಕಡೆಯ ದಿನವಾಗಿದ್ದು ಒಟ್ಟು 13 ನಾಮಪತ್ರ ಸಲ್ಲಿಕೆಯಾಗಿದೆ.

7 ಸಾಮಾನ್ಯ ಸ್ಥಾನಕ್ಕೆ
10 ನಾಮಪತ್ರ ಸಲ್ಲಿಕೆ
ಒಟ್ಟು 7 ಸಾಮಾನ್ಯ ಸ್ಥಾನಕ್ಕೆ 10 ನಾಮಪತ್ರ ಸಲ್ಲಿಕೆಯಾಗಿದೆ. ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ಸಂಘದ ನಿಕಟಪೂರ್ವ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ನಿಕಟ ಪೂರ್ವ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಗುಡ್ಡಪ್ಪ ಗೌಡ ಅಡ್ಯತಕಂಡ, ದಯಾನಂದ ರೈ ಕನ್ನೆಜಾಲು, ದಯಾನಂದ ಜಾಲು, ಮಹಮ್ಮದ್ ಕುಂಡಡ್ಕ, ಕೇಶವ ಕೆ.ಎನ್.ಕಂಡಿಪ್ಪಾಡಿ, ಜನಾರ್ದನ ಗೌಡ ಕಂಡಿಪ್ಪಾಡಿ, ಪ್ರೇಮನಾಥ ರೈ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಮೂರು ಸ್ಥಾನಗಳಿಗೆ
ಅವಿರೋಧ ಸಾಧ್ಯತೆ
ಮಹಿಳಾ ಮೀಸಲು ವರ್ಗದ ಎರಡು ಸ್ಥಾನಗಳಿಗೆ ಸಾವಿತ್ರಿ ಚಾಮುಂಡಿಮೂಲೆ, ಸುಮಲತಾ ಮರಿಕೇಯಿ ಹಾಗೂ ಪರಿಶಿಷ್ಟ ಪಂ.ಮೀಸಲಿನ ಒಂದು ಸ್ಥಾನಕ್ಕೆ ಪೂವಪ್ಪ ನಾಯ್ಕ ಅಡೀಲು ನಾಮಪತ್ರ ಸಲ್ಲಿಸಿದ್ದಾರೆ. ಮೂರು ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆ ಆಗಿರುವ ಕಾರಣ ನಾಮಪತ್ರ ಪರಿಶೀಲನೆ ನಡೆದು ಸ್ವೀಕೃತಗೊಂಡಲ್ಲಿ ಈ ಮೂರು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಲಿದೆ.

ಮೂರು ಸ್ಥಾನಕ್ಕಿಲ್ಲ
ಅಭ್ಯರ್ಥಿ..!
ಹಿಂದುಳಿದ ವರ್ಗ ಎ, ಬಿ ಹಾಗೂ ಪರಿಶಿಷ್ಟ ಜಾತಿ ವರ್ಗದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಈ ಮೂರು ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳು ಇಲ್ಲದ ಕಾರಣ ನಾಮಪತ್ರ ಸಲ್ಲಿಕೆ ಸಾಧ್ಯವಾಗಲಿಲ್ಲ.

ಮೇ 8 ಪರಿಶೀಲನೆ
ಮೇ 15 : ಫಲಿತಾಂಶ
ಮೇ 8 ರಂದು ರಿಟರ್ನಿಂಗ್ ಅಧಿಕಾರಿಯಿಂದ ನಾಮಪತ್ರ ಪರಿಶೀಲನೆ ನಡೆದು ಅಂತಿಮ ಪಟ್ಟಿ ಪ್ರಕಟಿಸಲಿದ್ದಾರೆ. ಮೇ 9 ಕ್ಕೆ ಉಮೇದುದಾರರು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 15 ರಂದು ಅಗತ್ಯ ಬಿದ್ದಲ್ಲಿ ಚುನಾವಣೆ ನಡೆಯುತ್ತದೆ. ಅಂತಿಮವಾಗಿ ಫಲಿತಾಂಶ ಪ್ರಕಟಿಸುವ ಪ್ರಕ್ರಿಯೆ ನಡೆಯಲಿದೆ.