Home ದಕ್ಷಿಣ ಕನ್ನಡ ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದಿದ್ದ ಮಗು ಅದಲು-ಬದಲು ಪ್ರಕರಣ!! ಡಿಎನ್ಎ ಟೆಸ್ಟ್ ವರದಿ ಬರುವ ಮುನ್ನವೇ...

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದಿದ್ದ ಮಗು ಅದಲು-ಬದಲು ಪ್ರಕರಣ!! ಡಿಎನ್ಎ ಟೆಸ್ಟ್ ವರದಿ ಬರುವ ಮುನ್ನವೇ ಪೋಷಕರಿಗೆ ಶಾಕ್

Hindu neighbor gifts plot of land

Hindu neighbour gifts land to Muslim journalist

ಕೆಲ ದಿನಗಳ ಹಿಂದೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದ್ದ ಮಗು ಅದಲು ಬದಲು ಗಂಭೀರ ಪ್ರಕರಣದಲ್ಲಿನ ಮಗುವೊಂದು ಇಂದು ಮೃತಪಟ್ಟಿದೆ.

ಅಕ್ಟೋಬರ್ 15 ರಂದು ನಡೆದ ಘಟನೆ ಇದಾಗಿದ್ದು, ಕುಂದಾಪುರ ಮೂಲದ ದಂಪತಿಯ ಮಗುವನ್ನು ಲೇಡಿಗೋಷನ್ ಆಸ್ಪತ್ರೆಯಲ್ಲಿ ಬದಲಿಸಲಾಗಿದೆ, ಹೆರಿಗೆಯಾದ ಕೂಡಲೇ ಹೆಣ್ಣುಮಗುವನ್ನು ತೋರಿಸಿದ್ದ ಸಿಬ್ಬಂದಿಗಳು ಆ ಬಳಿಕ ಬೇರೆ ಯಾರದ್ದೋ ಗಂಡುಮಗುವನ್ನು ನೀಡಿದ್ದರು. ದಾಖಲೆಗಳಲ್ಲೂ ಹೆಣ್ಣು ಮಗು ಎಂದು ನಮೂದಿಸಲಾಗಿದ್ದರೂ ಗಂಡುಮಗು ನೀಡಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿ ಆ ಬಳಿಕ ಕೋರ್ಟ್ ಆದೇಶದಂತೆ ಮಗು ಮತ್ತು ಪೋಷಕರ ಮಾದರಿಗಳನ್ನು ಡಿಎನ್ಎ ಟೆಸ್ಟ್ ಗೆ ಕಳುಹಿಸಲಾಗಿತ್ತು.

ಇನ್ನೇನು ಕೆಲ ದಿನಗಳಲ್ಲಿ ವರದಿ ಬರಲಿದ್ದು, ಆದರೆ ಇಂದು ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿರುವುದಾಗಿ ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ|ದುರ್ಗಾಪ್ರಸಾದ್ ಖಚಿತಪಡಿಸಿದ್ದು, ಮಗುವಿನ ಪೋಷಕರಿಗೂ ಮಾಹಿತಿ ನೀಡಲಾಗಿದೆ.