Home ದಕ್ಷಿಣ ಕನ್ನಡ ಮಂಗಳೂರು: ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ವಂಚಸಿದ ಆರೋಪ!! ಇನ್ನೊಬ್ಬ ಯುವತಿಯೊಂದಿಗೆ ಮದುವೆಗೆ ಸಿದ್ಧತೆ...

ಮಂಗಳೂರು: ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ವಂಚಸಿದ ಆರೋಪ!! ಇನ್ನೊಬ್ಬ ಯುವತಿಯೊಂದಿಗೆ ಮದುವೆಗೆ ಸಿದ್ಧತೆ ನಡೆಸಿಕೊಂಡಿದ್ದ ವಿಟ್ಲ ಮೂಲದ ಫಯಾದ್ ಹಾಗೂ ಇನ್ನೊರ್ವನ ಬಂಧನ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ನೀಡಿದ ಅತ್ಯಾಚಾರ ಹಾಗೂ ಹಣದ ವಂಚನೆ ಆರೋಪದ ದೂರಿನ ಅನ್ವಯ ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ವಿಟ್ಲ ಮೂಲದ ಫಯಾದ್ ಹಾಗೂ ಆತನ ಭಾವ ಮಂಗಳೂರಿನ ಬುರ್ಖಾ ಮಳಿಗೆಯೊಂದರ ಮಾಲಕನೆನ್ನಲಾದ ಉಂಬೈ ಯಾನೇ ಅಬ್ದುಲ್ ರಹಿಮಾನ್ ನನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಫಯಾದ್ ಎಂಬಾತನಿಗೆ ಮೇ 22 ರಂದು ಮದುವೆ ನಿಶ್ಚಯವಾಗಿದ್ದು, ಸದ್ಯ ಆರೋಪಿಯು ಬಂಧನವಾಗಿ ಜೈಲು ಪಾಲಾಗಿದ್ದರಿಂದ ಕುಟುಂಬ ಬೇಸರದಲ್ಲಿ ಮುಳುಗಿದೆ ಎಂದು ತಿಳಿದುಬಂದಿದೆ.

ಘಟನೆ ವಿವರ: ಆರೋಪಿ ಫಯಾದ್ ವಿವಾಹಿತ ಮಹಿಳೆಯೊಂದಿಗೆ ಗೆಳೆತನ ಬೆಳೆಸಿದ್ದು, ಆ ಬಳಿಕ ತನ್ನ ಭಾವನಿಗೆಂದು ಹೇಳಿ ಸುಮಾರು ಒಂದು ಕೋಟಿಗಿಂತಲೂ ಅಧಿಕ ಹಣ ಪಡೆದುಕೊಂಡಿದ್ದ.

ಮಹಿಳೆಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಫಯಾದ್ ಮಹಿಳೆಯ ಸ್ನೇಹ ಸಂಪಾದಿಸಿ ಮಹಿಳೆಯನ್ನು ಅತ್ಯಾಚಾರ ನಡೆಸಿದ್ದಾನೆ ಎಂದು ದೂರಲಾಗಿದೆ.ಆ ಬಳಿಕ ಆರೋಪಿ ನಾಪತ್ತೆಯಾಗಿದ್ದು, ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಅತ್ತ ಆತನ ಮದುವೆಗೂ ಸಿದ್ಧತೆ ನಡೆದಿದ್ದು, ಭಾವನೊಂದಿಗೆ ಸೇರಿಕೊಂಡು ಮಹಿಳೆಗೆ ಹಣ ವಂಚಿಸಲು ಮುಂದಾಗಿದ್ದು ಗಮನಕ್ಕೆ ಬರುತ್ತಿದ್ದಂತೆ ಮಹಿಳೆಯು ಎಚ್ಚೆತ್ತು ಇಬ್ಬರ ಮೇಲೂ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಯ ಭಾವ ಬುರ್ಖಾ ಮಳಿಗೆಯೊಂದರ ಮಾಲೀಕ ಅಬ್ದುಲ್ ರಹಿಮಾನನ ಮೇಲೂ ಈ ಮೊದಲು ಇಂತಹದೊಂದು ಆರೋಪ ಕೇಳಿ ಬಂದಿತ್ತು. ತನ್ನ ಬುರ್ಖಾ ಮಳಿಗೆಯಲ್ಲಿ ಕೆಲಸಕ್ಕಿದ್ದ ಹಿಂದೂ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುವ ಆರೋಪ ಕೇಳಿ ಬಂದಿದ್ದರಿಂದ ಬಜರಂಗದಳ ಕಾರ್ಯಕರ್ತರು ಆತನ ಮಳಿಗೆಗೆ ದಾಳಿ ನಡೆಸಿ ಎಚ್ಚರಿಕೆ ನೀಡಿ ಬಂದಿದ್ದರು ಎನ್ನುವ ವಿಚಾರವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಮಹಿಳೆಯ ದೂರಿನ ಅನ್ವಯ ಪಾಂಡೇಶ್ವರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376,420,506(341P) ಗಳಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಜೈಲಿಗೆ ಅಟ್ಟಲಾಗಿದ್ದು, ಸದ್ಯ ಮದುವೆಗೆ ಸಿದ್ಧತೆ ನಡೆಸಿಕೊಂಡಿದ್ದ ಮದುಮಗನ ಕುಟುಂಬಕ್ಕೆ ಆಘಾತವಾಗಿದೆ.