Home ದಕ್ಷಿಣ ಕನ್ನಡ ಮಂಗಳೂರು:ಇತಿಹಾಸದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಗಳ ಆಯೋಜಕತ್ವದಲ್ಲಿ ಕೋಡಿಕಲ್ ನಲ್ಲಿ ನಡೆಯಲಿದೆ ಪಾವಂಜೆ ಮೇಳದ ಯಕ್ಷಗಾನ...

ಮಂಗಳೂರು:ಇತಿಹಾಸದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಗಳ ಆಯೋಜಕತ್ವದಲ್ಲಿ ಕೋಡಿಕಲ್ ನಲ್ಲಿ ನಡೆಯಲಿದೆ ಪಾವಂಜೆ ಮೇಳದ ಯಕ್ಷಗಾನ ಸೇವೆ!! ಪುಂಡರಿಗೆ ಸೆಡ್ಡು ಹೊಡೆದು ಗೌರವಯುತವಾಗಿ ಬದುಕು ಸಾಗಿಸುವವರಿಂದ ಮಹತ್ಕಾರ್ಯ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ನಗರದ ಹಲವೆಡೆಗಳಲ್ಲಿ ತೃತೀಯ ಲಿಂಗಿಗಳು ಬೀಡು ಬಿಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚೆಗೆ ಅವರೊಳಗೇ ಜಗಳಗಳು ನಡೆದಿರುವುದು, ಮೊನ್ನೆ ತಾನೇ ಪ್ರತಿಭಟನಾ ನಿರತ ವ್ಯಕ್ತಿಯ ಬಳಿಗೆ ತೆರಳಿ ಅಶ್ಲೀಲವಾಗಿ ವರ್ತಿಸಿದ್ದು ಇಂತಹ ಹಲವು ಉದಾಹರಣೆಗಳಿವೆ.ಈ ನಡುವೆ ಕೆಲ ತೃತೀಯ ಲಿಂಗಿಗಳು ಇಂತಹವುಗಳಿಗೆ ಸೆಡ್ಡು ಹೊಡೆದು ಗೌರವಯುತವಾಗಿ ನಡೆಯಲು ಪ್ರಯತ್ನನಿಸುತ್ತಿದ್ದೂ ಇದಕ್ಕೆಲ್ಲಾ ಒಂದು ಉದಾಹರಣೆ ಎಂಬಂತಿದೆ ಫೆ.25 ರಂದು ನಡೆಯುವ ಯಕ್ಷಗಾನ ಸೇವೆ.

ಹೌದು, ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳು ಆಯೋಜಿಸಿರುವ ಇಂತಹದೊಂದು ಸೇವೆಯ ಆಟ ನಡೆಯಲಿದ್ದು ಮಂಗಳೂರಿನ ಕೋಡಿಕಲ್ ಕಟ್ಟೆ ಮೈದಾನದಲ್ಲಿ ಸಾಯಂಕಾಲ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಜ್ಞಾನ ಶಕ್ತಿ ಕೃಪಾಪೋಷಿತ ಯಕ್ಷಗಾನ ಮೇಳದವರಿಂದ ಈ ಯಕ್ಷಗಾನ ಸೇವೆ ನಡೆಯಲಿದೆ.

ಯಾರಿಂದಲೂ ದೇಣಿಗೆ ಪಡೆಯದೇ ಸ್ವತಃ ತಾವೇ ಸಂಪಾದಿಸಿದ ಹಣದಲ್ಲಿ ದೇವಿಯ ಸೇವೆ ಗೈಯ್ಯಲು ಮುಂದಾಗಿರುವುದು ಖುಷಿಯ ವಿಚಾರ.ಸುಮಾರು 1500 ಜನ ಸೇರಲಿರುವ ಈ ಒಂದು ಯಕ್ಷಗಾನ ಕಾರ್ಯಕ್ರಮದಲ್ಲಿ ಸೇರಿದ ಎಲ್ಲರಿಗೂ ಅನ್ನದಾನ ಸೇವೆಯೂ ನೆರವೇರಲಿದೆ.

ಮೂಲತಃ ಕುಲಶೇಖರದ ನಿವಾಸಿಗಳಾದ ಐವರು ತೃತೀಯ ಲಿಂಗಿಗಳು ಪದವೀಧರರು ಮಾತ್ರವಲ್ಲದೆ,ಮಂಗಳೂರಿನ ಖಾಸಗಿ ಕಂಪನಿಗಳಲ್ಲಿ ಹುದ್ದೆಯಲ್ಲಿದ್ದಾರೆ. ಇತರ ಕೆಲ ಪುಂಡರಂತೆ ವರ್ತಿಸುವ ತೃತೀಯ ಲಿಂಗಿಗಳಿಗೆ ಹೋಲಿಸಿದರೆ ಗೌರವಯುತವಾಗಿ ಬಾಳುವವರ ಸಂಖ್ಯೆಯೂ ಮಂಗಳೂರಿನಲ್ಲಿದೆ ಎನ್ನುವುದಕ್ಕೆ ಈ ಐವರೇ ಸಾಕ್ಷಿ.