Home ದಕ್ಷಿಣ ಕನ್ನಡ ಮಂಗಳೂರು: ಮೀನುಗಾರಿಕ ದಕ್ಕೆಯಲ್ಲಿ ಯುವಕನಿಗೆ ಗಂಭೀರ ಹಲ್ಲೆ!! ತಲೆ ಕೆಳಗೆ ಹಾಕಿ ಕಟ್ಟಿ ಹಲ್ಲೆ ನಡೆಸುತ್ತಿರುವ...

ಮಂಗಳೂರು: ಮೀನುಗಾರಿಕ ದಕ್ಕೆಯಲ್ಲಿ ಯುವಕನಿಗೆ ಗಂಭೀರ ಹಲ್ಲೆ!! ತಲೆ ಕೆಳಗೆ ಹಾಕಿ ಕಟ್ಟಿ ಹಲ್ಲೆ ನಡೆಸುತ್ತಿರುವ ದೃಶ್ಯ ವೈರಲ್

Hindu neighbor gifts plot of land

Hindu neighbour gifts land to Muslim journalist

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಲ್ಲೆಯ ವೀಡಿಯೋವೊಂದು ವೈರಲ್ ಆಗುತ್ತಿದೆ.ಥೇಟ್ ಸಿನಿಮಾ ದಲ್ಲಿ ಇರುವಂತೆಯೇ ಇಲ್ಲೊಬ್ಬ ಯುವಕನನ್ನು ತಲೆ ಕೆಲಗಾಕಿ ಕಟ್ಟಿ ಹಲ್ಲೆ ನಡೆಸಲಾಗುತ್ತಿದೆ. ಹಾಗಂತ ಅದೇನು ಸಿನಿಮಾ ಪ್ರದರ್ಶನವಲ್ಲ, ಅಸಲಿಗೆ ಆ ಘಟನೆ ನಡೆದಿದ್ದು ಬುದ್ಧಿವಂತರ ಜಿಲ್ಲೆಯಾದ ಮಂಗಳೂರಿನಲ್ಲಿ.ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ನಡೆದ ಇಂಥಹ ಅಮಾನವೀಯ ಘಟನೆಯು ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿದ್ದಾರೆ.

ವೈಲಾ ಶೇನು

ಮೊಬೈಲ್ ಕಳವು ನಡೆಸಿದ್ದಾನೆ ಎಂಬ ಆರೋಪ ಹೊರಿಸಿ ಯುವಕನೋರ್ವನನ್ನು ಬೋಟ್ ನ ಎತ್ತರದ ಕಂಬಿಗೆ ಕಟ್ಟಿ ಹಾಕಿ ಚೈನ್ ಹಾಗೂ ಕೈಯ್ಯಲ್ಲಿ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆಗಿದ್ದು, ಹಲ್ಲೆಯಲ್ಲಿ ಗಾಯಗೊಂಡ ಯುವಕನನ್ನು ಆಂಧ್ರ ಮೂಲದ ವೈಲಾ ಶೇನು ಎಂದು ಗುರುತಿಸಲಾಗಿದ್ದು, ಮೀನು ಕಾರ್ಮಿಕರೇ ಸೇರಿ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.