Home ದಕ್ಷಿಣ ಕನ್ನಡ ಮಂಗಳೂರು: ನೆರೆ ಮನೆಗೆ ಟಿವಿ ನೋಡಲು ಬಂದಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ!! ಖಾಸಗಿ ಅಂಗವನ್ನು...

ಮಂಗಳೂರು: ನೆರೆ ಮನೆಗೆ ಟಿವಿ ನೋಡಲು ಬಂದಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ!! ಖಾಸಗಿ ಅಂಗವನ್ನು ತೋರಿಸಿ ಅಸಭ್ಯವರ್ತನೆ-ಕೊಲೆ ಬೆದರಿಕೆ

Hindu neighbor gifts plot of land

Hindu neighbour gifts land to Muslim journalist

ಮನೆಗೆ ಟಿವಿ ನೋಡಲು ಬಂದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದಲ್ಲದೇ, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉರ್ವ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನಿತೇಶ್ ಅಲಿಯಾಸ್ ನಿತಿನ್(19)ಎಂದು ಗುರುತಿಸಲಾಗಿದೆ.

ಘಟನೆ ವಿವರ: ನಗರದ ಸರ್ಕಾರಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬಳು ಶಾಲೆ ಮುಗಿಸಿ ಸಂಜೆ ಹೊತ್ತಲ್ಲಿ ನೆರೆಮನೆಗೆ ತೆರಳಿದ್ದಳು.ಈ ವೇಳೆ ಆರೋಪಿ ನಿತಿನ್ ಬಾಲಕಿಗೆ ತನ್ನ ಖಾಸಗಿ ಅಂಗವನ್ನು ಕೈಯ್ಯಲ್ಲಿ ಹಿಡಿಯಲು ಹೇಳಿದಲ್ಲದೇ, ಬಾಯಿಗೆ ಹಾಕುವಂತೆ ಒತ್ತಾಯಿಸಿದ್ದ.

ಈತನ ಕಿರುಕುಳದಿಂದ ಹೆದರಿದ ಬಾಲಕಿ ಆತನ ಮನೆಯಿಂದ ತನ್ನ ಮನೆಗೆ ಓಡಿದ್ದು, ಅಲ್ಲಿಗೂ ಬಂದ ಆರೋಪಿ ಘಟನೆಯನ್ನು ಬಾಯಿ ಬಿಟ್ಟರೆ ಕೊಲ್ಲುತ್ತೇನೆ ಎಂದು ಬೆದರಿಸಿದ್ದ.ಘಟನೆಯ ಸಂಬಂಧ ಬಾಲಕಿಯ ಪೋಷಕರು ಉರ್ವ ಠಾಣೆಯಲ್ಲಿ ಆರೋಪಿಯ ವಿರುದ್ಧ ದೂರನ್ನು ದಾಖಲಿಸಿದ್ದು, ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.