Home ದಕ್ಷಿಣ ಕನ್ನಡ ಮಂಗಳೂರು: ಹಾಡಹಗಲೇ ಕೆಫೆಯೊಂದರಲ್ಲಿ ಜಡೆ ಎಳೆದಾಡಿಕೊಂಡ ವಿದ್ಯಾರ್ಥಿನಿಯರು!! ಯುವಕರೊಂದಿಗೆ ಇದ್ದ ಹಿನ್ನೆಲೆಯಲ್ಲಿ ಇಬ್ಬರು ಯುವತಿಯರಿಂದ ಓರ್ವಳ...

ಮಂಗಳೂರು: ಹಾಡಹಗಲೇ ಕೆಫೆಯೊಂದರಲ್ಲಿ ಜಡೆ ಎಳೆದಾಡಿಕೊಂಡ ವಿದ್ಯಾರ್ಥಿನಿಯರು!! ಯುವಕರೊಂದಿಗೆ ಇದ್ದ ಹಿನ್ನೆಲೆಯಲ್ಲಿ ಇಬ್ಬರು ಯುವತಿಯರಿಂದ ಓರ್ವಳ ಮೇಲೆ ಹಲ್ಲೆ-ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಮಂಗಳೂರಿನಲ್ಲಿರುವ ಕೆಫೆಯೊಂದರಲ್ಲಿ ವಿದ್ಯಾರ್ಥಿನಿಯರ ಮಧ್ಯೆ ಹೊಡೆದಾಟ ನಡೆದ ಬಗ್ಗೆ ವರದಿಯಾಗಿದ್ದು, ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಯೆನ್. ಕೆಫೆಯಲ್ಲಿ ವಿದ್ಯಾರ್ಥಿನಿಯೋರ್ವಳು ಯುವಕರ ಜೊತೆ ಕುಳಿತಿದ್ದ ಸಂದರ್ಭ ಅಲ್ಲಿಗೆ ಬಂದ ಇನ್ನೋರ್ವ ವಿದ್ಯಾರ್ಥಿನಿ ಹಲ್ಲೆಗೆ ಮುಂದಾಗಿದ್ದಾಳೆ ಎನ್ನಲಾಗಿದೆ. ಈ ಸಂದರ್ಭ ಅಲ್ಲಿಗೆ ಮತ್ತೋರ್ವ ವಿದ್ಯಾರ್ಥಿನಿಯ ಪ್ರವೇಶವಾಗಿದ್ದು,ಗಲಾಟೆ ತಾರಕಕ್ಕೇರಿದೆ.

ಸ್ಥಳದಲ್ಲಿದ್ದ ಯುವಕರು ವಿದ್ಯಾರ್ಥಿನಿಯರ ಮನವೊಲಿಸಲು ಪ್ರಯತ್ನಿಸಿದ್ದು,ವಿದ್ಯಾರ್ಥಿನಿಯರ ಜಡೆ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಘಟನೆಯ ಬಗ್ಗೆ ಮಂಗಳೂರು ಪೂರ್ವ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.