Home ದಕ್ಷಿಣ ಕನ್ನಡ Mangaluru: ಕೋಳಿ ಅಂಕ ನಡೆಸುವುದು ಅಪರಾಧ; ದ.ಕ. ಎಸ್ಪಿ ಆದೇಶ

Mangaluru: ಕೋಳಿ ಅಂಕ ನಡೆಸುವುದು ಅಪರಾಧ; ದ.ಕ. ಎಸ್ಪಿ ಆದೇಶ

Hindu neighbor gifts plot of land

Hindu neighbour gifts land to Muslim journalist

Mangaluru Cock Fight: ಬೆಳ್ತಂಗಡಿಯ ಶಾಸಕ ಹರೀಶ್‌ ಪೂಂಜಾ ಅವರು ಇತ್ತೀಚೆಗೆ ಕೋಳಿ ಅಂಕಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಇದರ ಕುರಿತು ಅನಂತರ ಕೆಲವು ಚರ್ಚೆಗಳು ನಡೆದವು. ಇದೀಗ ಈ ಕುರಿತು ದಕ್ಷಿಣ ಕನ್ನಡ ಎಸ್ಪಿ ಅವರು ಖಡಕ್‌ ಆದೇಶವೊಂದನ್ನು ನೀಡಿದ್ದಾರೆ.

ಜೂಜಿನ ಕೋಳಿ ಅಂಕ ಕಾನೂನು ಬಾಹಿರ ಅಪರಾಧ. ಇದನ್ನು ನಡೆಸಲು ಪೊಲೀಸ್‌ ಠಾಣೆಗಳಲ್ಲಿ ಅನುಮತಿ ನೀಡಲು ಕಾನೂನಿನಲ್ಲಿ ಯಾವುದೇ ಅವಕಾಶವಿರುವುದಿಲ್ಲ.

ಹಾಗಾಗಿ ಸಾರ್ವಜನಿಕರು ಪೊಲೀಸ್‌ ಠಾಣೆಗಳಿಗೆ ಕೋಳಿ ಅಂಕ ನಡೆಸಲು ಅನುಮತಿ ಮನವಿ ಸಲ್ಲಿಸಬಾರದು. ಅಕ್ರಮ ಚಟುವಟಿಕೆ ನಡೆಸುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಎಸ್ಪಿ ರಿಷ್ಯಂತ್‌ ಆದೇಶ ನೀಡಿದ್ದಾರೆ.