Home ದಕ್ಷಿಣ ಕನ್ನಡ ಮಂಗಳೂರು: ಪೊಲೀಸ್‌ ಅಧಿಕಾರಿ ಎಂದು ನಾಟವಾಡಿದ ನರ್ಸಿಂಗ್ ವಿದ್ಯಾರ್ಥಿ ಅರೆಸ್ಟ್‌!

ಮಂಗಳೂರು: ಪೊಲೀಸ್‌ ಅಧಿಕಾರಿ ಎಂದು ನಾಟವಾಡಿದ ನರ್ಸಿಂಗ್ ವಿದ್ಯಾರ್ಥಿ ಅರೆಸ್ಟ್‌!

Mangaluru

Hindu neighbor gifts plot of land

Hindu neighbour gifts land to Muslim journalist

Mangaluru: ಇತ್ತೀಚೆಗೆ ಜನರನ್ನು ಮರುಳು ಮಾಡಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪೊಲೀಸ್ ಹಾಗೂ RAW ಅಧಿಕಾರಿ ಎಂದು ಹೇಳಿ ಎಲ್ಲರನ್ನೂ ವಂಚನೆ ಮಾಡುತ್ತಿದ್ದ ಮಂಗಳೂರಿನ (Mangaluru) ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು (Student) ಪೊಲೀಸರು ಬಂಧಿಸಿದ್ದಾರೆ.

ಕೇರಳದ ಇಡುಕಿ ಮೂಲದ ಆರೋಪಿ ಬೆನೆಡಿಕ್ಟ್ ಸಾಬು ಬಂಧಿತ ವಿದ್ಯಾರ್ಥಿಯಾಗಿದ್ದು, 6 ತಿಂಗಳ ಹಿಂದೆ ಜಿಎನ್ಎಂ ಕೋರ್ಸ್ಗೆ ಸೇರಿಕೊಂಡಿದ್ದ ವಿದ್ಯಾರ್ಥಿ ಬೆನೆಡಿಕ್ಟ್ ಸಾಬು,ಕೇರಳ ಅಗ್ರಿಕಲ್ಚರ್ ಇಲಾಖೆಯ ಅಧಿಕಾರಿ ಎಂದು ಕಾಲೇಜಿನ ಪ್ರಿನ್ಸಿಪಾಲ್ ಗೆ(Principal)ತಿಳಿಸಿದ್ದ ವಿದ್ಯಾರ್ಥಿ,ಇದು ಸಾಲದೆಂಬಂತೆ ಸಬ್ ಇನ್ಸ್ಪೆಕ್ಟರ್ ಎಂದು ಕೂಡ ಬಂಡಲ್ ಬಡಾಯಿ ಕೊಚ್ಚಿಕೊಂಡಿದ್ದ. ಸದ್ಯ RAW ಫೀಲ್ಡ್ ಏಜೆಂಟ್ ಆಗಿರುವುದಾಗಿ ಹೇಳಿಕೊಂಡಿದ್ದ ಆರೋಪಿ, ಕಾಲೇಜಿನಲ್ಲಿ ಡ್ರಗ್ಸ್ ಅವೇರ್ನೆಸ್ ಕಾರ್ಯಕ್ರಮದ ಸಂದರ್ಭ ಬೆನೆಡಿಕ್ಟ್ ಸಾಬು ಪೊಲೀಸರ ಮುಂದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

ಕಾಲೇಜಿನಲ್ಲಿ ನಲ್ಲಿ ಪೊಲೀಸ್ ಇಲಾಖೆಯಿಂದ ಆಯೋಸಲಾಗಿದ್ದ ಡ್ರಗ್ ಜಾಗೃತಿ ಕಾರ್ಯಕ್ರಮದ ವೇಳೆ ಬೆನೆಡಿಕ್ಟ್ ಸಾಬು ವರ್ತನೆಯಿಂದ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಕಾರ್ಯಕ್ರಮ ಮುಗಿದ ಬಳಿಕ ಪೊಲೀಸರು ವಿದ್ಯಾರ್ಥಿ ಬೆನೆಡಿಕ್ಟ್ ಸಾಬುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರ ಬಿದ್ದಿದೆ.

ಪೊಲೀಸರಿಗೂ ಕೂಡ ತಾನೊಬ್ಬ RAW ಅಧಿಕಾರಿ ಎಂದು ಹೇಳಿಕೊಂಡಿದ್ದ ವಿದ್ಯಾರ್ಥಿ ಪೊಲೀಸ್ ಸಮವಸ್ತ್ರವನ್ನು ಕೂಡ ಹೊಲಿಸಿಕೊಂಡಿದ್ದನಂತೆ. ಆತನ ಚಲನವಲನ ,ನಡೆ ನುಡಿ ಕಂಡು ಉರ್ವಾ ಪೊಲೀಸರು ಅನುಮಾನಗೊಂಡು ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಬೆನೆಡಿಕ್ಟ್ ಸಾಬು ಮುಖವಾಡ ಕಳಚಿ ಬಿದ್ದಿದೆ. ಬಂಧಿತ ಆರೋಪಿಯಿಂದ ನಕಲಿ‌ ಐಡಿ ಕಾರ್ಡ್ಗಳು, ಪೊಲೀಸ್ ಸಮವಸ್ತ್ರ, ಮೊಬೈಲ್, ಲ್ಯಾಪ್ಟಾಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Kodagu: ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ; ಸೇನಾಧಿಕಾರಿ ತಿಮ್ಮಯ್ಯ ಪ್ರತಿಮೆಗೆ ಭಾರೀ ಹಾನಿ!