Home ದಕ್ಷಿಣ ಕನ್ನಡ ಮಂಗಳೂರು : ಮರಕಡ ಗುರು ಪರಾಶಕ್ತಿ ನರೇಂದ್ರನಾಥ ಯೋಗೇಶ್ವರ ಸ್ವಾಮೀಜಿ ಹೃದಯಾಘಾತದಿಂದ ವಿಧಿವಶ

ಮಂಗಳೂರು : ಮರಕಡ ಗುರು ಪರಾಶಕ್ತಿ ನರೇಂದ್ರನಾಥ ಯೋಗೇಶ್ವರ ಸ್ವಾಮೀಜಿ ಹೃದಯಾಘಾತದಿಂದ ವಿಧಿವಶ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ಮರಕಡ ಗುರು ಪರಾಶಕ್ತಿ ಮಠದ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರ ಸ್ವಾಮೀಜಿ( 72)ಯವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ.

ಇಂದು ಬೆಳಿಗ್ಗೆ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಧಾರ್ಮಿಕ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಕೂಡಾ ಪಾಲ್ಗೊಳ್ಳುತ್ತಾ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿದ್ದರು. ಮರಕಡ ಮತ್ತು ಮಡ್ಯಾರ್ ನಲ್ಲಿ ಕ್ಷೇತ್ರ ಹೊಂದಿ ಅಪಾರ ಭಕ್ತಾದಿಗಳನ್ನು ಹೊಂದಿದ್ದರು.

ನಿತ್ಯ ಭಜನೆ, ಸತ್ಸಂಗ, ಪಾರಾಯಣ, ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಮಾಜದ ಪ್ರಗತಿಗೆ ಬಹಳಷ್ಟು ಕೊಡುಗೆ ನೀಡಿದ್ದರು.

ಮರಕಡ ಕ್ಷೇತ್ರದಲ್ಲಿ ಬೃಹತ್ತಾದ ಹನುಮಂತನ ವಿಗ್ರಹ ಸ್ಥಾಪನೆ ಮಾಡಿದ್ದರು. ಸ್ವಾಮೀಜಿಯ ಮೃತದೇಹವನ್ನು ಇಂದು ಸಂಜೆ ಮಡ್ಯಾರಿನ ಪರಾಶಕ್ತಿ ಕ್ಷೇತ್ರ ಅಥವಾ ದೇವರ ಮನೆಗೆ ತರುವ ಸಾಧ್ಯತೆಗಳಿದ್ದು ಇಂದೇ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನಡೆಯಲಿದೆ ಎಂದು ಭಕ್ತರು ಹೇಳಿದ್ದಾರೆ. ಇದೇ ಫೆ. 16 ರಂದು ಮರಕಡ ದಲ್ಲಿ ನೂತನ ಶ್ರೀ ಗುರು ಪರಾಶಕ್ತಿ ಮಠ ನಿರ್ಮಾಣವಾಗಿದ್ದು ಸ್ವಾಮೀಜಿಗಳ ಮಠ ಪ್ರವೇಶ ಕಾರ್ಯಕ್ರಮ ನಿಗದಿಯಾಗಿತ್ತು. ಬ್ರಹ್ಮಕಲಶದ ಕಾರ್ಯಕ್ರಮವೂ ಮೇ. 8 ರಂದು ನಿಗದಿಯಾಗಿತ್ತು. ಬ್ರಹ್ಮಕಲಶದ ಮೊದಲೇ ಸ್ವಾಮೀಜಿ ಇಹಲೋಕ ತ್ಯಜಿಸಿದ್ದು, ಅವರ ಭಕ್ತ ವರ್ಗದವರನ್ನು ಶೋಕಕ್ಕೀಡು ಮಾಡಿದೆ. ಸ್ವಾಮೀಜಿಗಳು ತನ್ನ ಪೂರ್ವಾಶ್ರಮದ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.