Home ದಕ್ಷಿಣ ಕನ್ನಡ ಮುಂಬೈ: ಜೀವ ಬೆದರಿಕೆ ಇದೆ ಎಂದಿದ್ದ ಮಂಗಳೂರಿನ ಯುವಕನ ಮೃತದೇಹ ಚರಂಡಿಯಲ್ಲಿ ಪತ್ತೆ!!

ಮುಂಬೈ: ಜೀವ ಬೆದರಿಕೆ ಇದೆ ಎಂದಿದ್ದ ಮಂಗಳೂರಿನ ಯುವಕನ ಮೃತದೇಹ ಚರಂಡಿಯಲ್ಲಿ ಪತ್ತೆ!!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಮುಂಬೈ ನಗರದ ಚರಂಡಿಯೊಂದರಲ್ಲಿ ಮಂಗಳೂರು ಹೊರವಲಯದ ಉಳ್ಳಾಲ ನಿವಾಸಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯ ಜೇಬಿನಲ್ಲಿದ್ದ ಚುನಾವಣಾ ಗುರುತಿನ ಚೀಟಿಯ ಆಧಾರದಲ್ಲಿ ಯುವಕನನ್ನು ಉಳ್ಳಾಲ ಬಂಡಿಕೊಟ್ಯ ನಿವಾಸಿ ಸುಧೀರ್ ಕುಮಾರ್(32) ಎಂದು ಗುರುತಿಸಲಾಗಿದೆ.

ತನಗೆ ಜೀವ ಬೆದರಿಕೆ ಇದೆ ಎಂದು ಸ್ನೇಹಿತರೊಂದಿಗೆ ಹೇಳಿಕೊಂಡಿದ್ದ ಸುಧೀರ್ ಇದ್ದಕ್ಕಿದ್ದಂತೆ ಆಗಸ್ಟ್ 14ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಮುಂಬೈ ನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರು ದಾಖಲಾಗಿ ವಾರಗಳು ಉರುಳುತ್ತಲೇ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಗುರುತು ಪತ್ತೆಯಾಗಿದೆ ಎನ್ನಲಾಗಿದೆ. ಸದ್ಯ ಕೊಲೆ ಎನ್ನುವ ಅನುಮಾನ ವ್ಯಕ್ತವಾಗಿದ್ದು, ಬೆದರಿಕೆ ಹಾಕಿದವರು ಯಾರು ಎನ್ನುವಲ್ಲಿಂದ ಹಿಡಿದು ಸಾವಿನ ವರೆಗಿನ ಸಂಪೂರ್ಣ ತನಿಖೆ ಶೀಘ್ರ ನಡೆದು ಆರೋಪಿಗಳ ಬಂಧನ ಕಾರ್ಯ ಶೀಘ್ರ ನಡೆಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.