Home ದಕ್ಷಿಣ ಕನ್ನಡ ಉಡುಪಿ : ಮಹಾಲಕ್ಷ್ಮೀ ಕ್ಷೇತ್ರಕ್ಕೆ 5 ಕೋಟಿ – ಸಿಎಂ ಘೋಷಣೆ

ಉಡುಪಿ : ಮಹಾಲಕ್ಷ್ಮೀ ಕ್ಷೇತ್ರಕ್ಕೆ 5 ಕೋಟಿ – ಸಿಎಂ ಘೋಷಣೆ

Hindu neighbor gifts plot of land

Hindu neighbour gifts land to Muslim journalist

ಉಡುಪಿ: ಕಾಪು ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಬ್ರಹ್ಮಕಲಶಪುಣ್ಯೋತ್ಸವ ನಡೆಯುತ್ತಿದ್ದು, ಇಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ದೇವಿ ದೇವಸ್ಥಾನದ ಕ್ಷೇತ್ರದೊಳಗೆ ಆಗಮಿಸಿದ ಸಿಎಂ ಶ್ರೀ ದೇವಿ ದರುಶನ ಪಡೆದುಕೊಂಡ ಬಳಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬಳಿಕ ಮಾತನಾಡಿದ ಅವರು ‘ಮಹಾಲಕ್ಷ್ಮೀ ಹೆಸರಿನಲ್ಲಿಯೇ ಶಕ್ತಿ ಇದೆ. ಮಹಾಲಕ್ಷ್ಮೀ ಕೃಪೆ ಆದವರು ಬದುಕಿನಲ್ಲಿ ಅತ್ಯಂತ ಯಶಸ್ವಿ ಆಗುತ್ತಾರೆ’ ಎಂದರು.

ಸಾಹಸ ಅನ್ನುವುದು ಕರಾವಳಿ ಜನರ ಗುಣಧರ್ಮ ಆಗಿದೆ. ಮೊಗವೀರರದ್ದು ಸಾಹಸವೇ ಗುಣಧರ್ಮವಾಗಿದೆ. ಮೊಗವೀರರು ಕಠಿಣಪರಿಶ್ರಮಿಗಳು ಎಂದರು.

ಮೀನುಗಾರಿಕೆಗೆ ಹೊಸತಂತ್ರಜ್ಞಾನದ ಬಳಕೆ ಮಾಡಿ ಹೆಚ್ಚಿನ ಮೀನುಗಾರಿಕೆ ಮಾಡಿಸಲು

100 ಹೈಸ್ಪೀಡ್ ಬೋಟುಗಳನ್ನು ಕೊಡುತ್ತೇವೆ. 5000 ಮನೆ ಕಟ್ಟಿಕೊಡುವ ಯೋಜನೆಗಳನ್ನು ಮೀನುಗಾರರಿಗೆ ರೂಪಿಸಲಾಗಿದೆ. 8 ಬಂದರುಗಳ ಡ್ರೆಜಿಂಗ್‌ಗೆ ವಿಶೇಷ ಅನುದಾನ ನೀಡಲಾಗಿದೆ ಒಟ್ಟಿನಲ್ಲಿ ಮೀನುಗಾರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ.

ಮಹಾಲಕ್ಷ್ಮೀ ಕ್ಷೇತ್ರಕ್ಕೆ 5 ಕೋಟಿ ರೂಪಾಯಿ ನೆರವು ಅಲ್ಲದೆ ಮೊಗವೀರರ ಬೇಡಿಕೆಗೆ ಸ್ಪಂದಿಸುವುದಾಗಿ ನುಡಿದರು. ಪ್ರವಾಸೋದ್ಯಮ ಇಲಾಖೆ ವತಿಯಿಂದ ಮೊಗವೀರ ಮಕ್ಕಳಿಗೆ ಹಿಂದುಳಿದ ವರ್ಗಗಳ ಹಾಸ್ಟೆಲ್, ಹತ್ತು ತಿಂಗಳಿಗೆ ಎರಡು ಲಕ್ಷ ಲೀಟರ್ ಸಬ್ಸಿಡಿ ಡೀಸೆಲ್, ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಬಗ್ಗೆ ಬ್ಯಾಂಕ್ ಗಳ ಜೊತೆ ಮಾತುಕತೆ ಮಾಡಿ ಯೋಜನೆ ರೂಪಿಸುತ್ತೇನೆ ಎಂದು ಭರವಸೆ ನೀಡಿದರು.