Home ದಕ್ಷಿಣ ಕನ್ನಡ ಕಡಬ : ಮಾದಕ ವಸ್ತುಗಳ ವಿರೋಧಿ ದಿನಾಚರಣೆ

ಕಡಬ : ಮಾದಕ ವಸ್ತುಗಳ ವಿರೋಧಿ ದಿನಾಚರಣೆ

Hindu neighbor gifts plot of land

Hindu neighbour gifts land to Muslim journalist

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಕಡಬ ತಾಲೂಕು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ (ರಿ )ಧರ್ಮಸ್ಥಳ ಜಿಲ್ಲಾ ಜನಜಾಗೃತಿ ವೇದಿಕೆ ದ. ಕ 2 ಜಿಲ್ಲೆ ಇದರ ಆಶ್ರಯ ದಲ್ಲಿ ಪರಮ ಪೂಜ್ಯ ಡಾ॥ ಡಿ.ವೀರೇಂದ್ರ ಹೆಗ್ಗಡೆ ಯವರ ಹಾಗೂ ಮಾತೃಶ್ರೀ ಡಾ॥ ಹೇಮಾವತಿ ವಿ ಹೆಗ್ಗಡೆ ಯವರ ಕೃಪಾಶಿರ್ವಾದ ದೊಂದಿಗೆ ವಿಶ್ವ ತಂಬಾಕು ದಿನಾಚರಣೆಯ ಅಂಗವಾಗಿ ಮಾಧಕ ವಸ್ತು ಗಳ ಸೇವನೆಯಿಂದ ಮಾನವನಿಗೆ ಆಗುವ ದುಷ್ಪರಿಣಾಮ ಗಳ ಬಗ್ಗೆ ಮಾಹಿತಿ ಕಾರ್ಯಕ್ರಮವು ಕೇಪು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಗತಿಬಂಧು ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ಸೀತಾಚಂದ್ರನ್ ರವರ ಅಧ್ಶಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲವ್ಶಕ್ತಿ ಡಾ| ತ್ರಿಮೂರ್ತಿ ಯವರು ಮಾತನಾಡಿ ಮಾಧಕ ವಸ್ತು ಗಳ ಸೇವನೆ ಯಿಂದ ಕ್ಯಾನ್ಸರ್ ನಂತ ಮಾರಕ ಕಾಯಿಲೆ ಯಿಂದ ಬಳಲುವಂತಾಗುತ್ತದೆ ಮತ್ತು ದುಶ್ಚಟ ಕ್ಕೆ ಬಲಿಯಾದವರನ್ನು ಇಡೀ ಸಮಾಜವೇ ಹೀನವಾಗಿ ನೋಡುತ್ತದೆ ಈ ಚಟ ದಿಂದ ಮುಕ್ತರಾಗಿ ಜೀವನ ನಡೆಸಲು ಜಾಗ್ರತರಾಗುವಂತೆ ತಿಳಿಸಿದರು. ಈ ಕಾರ್ಯಕ್ರಮ ವನ್ನು ಕಡಬ ಜನಜಾಗೃತಿ ವೇದಿಕೆ ವಲಯಾಧ್ಯಕ್ಷರಾದ ಕರುಣಾಕರ ಗೋಖಟೆ ಉದ್ಘಾಟಿಸಿದರು. ಮುಖ್ಯ ಅಥಿತಿ ಯಾಗಿ ಮೇದಪ್ಪ ಗೌಡ ಯನ್ ಯೋಜನಾ ಧಿ ಕಾರಿ ಗಳು ಶ್ರೀ ಕ್ಷೇ ಧ ಗ್ರಾ ಯೋ (ರಿ ) ಕಡಬ ತಾಲೂಕು. ತಾಲ್ಲೂಕು ಜನಜಾಗೃ ತಿ ಸದಸ್ಯರು ತಾಲೂಕು ಯುವಜನಒಕ್ಕೂಟದ ಅಧ್ಶಕ್ಷರಾದ ಶಿವಪ್ರಸಾದ್ ಮೈಲೇರಿ ರವರು ಮಾಹಿತಿ ನೀಡಿ ಶುಭ ಹಾರೈಸಿದರು . ಸಾಧನಾ ಜ್ಞಾನವಿಕಾಸ ಕೇಂದ್ರದ ಸದಸ್ಶರುಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಏರ್ಪಟ್ಟಿತು.

ಕಡಬ ವಲಯ ಮೇಲ್ವಿಚಾರಕರಾದ ರವಿಪ್ರಸಾದ್ ಆಲಾಜೆ ಸ್ವಾಗತಿಸಿದರು . ಜ್ಞಾನವಿಕಾಸ ತಾಲೂಕು ಸಮನ್ವಯಾ ಧಿಕಾರಿ ಚೇತನ ಜಿ ಕಾರ್ಯಕ್ರಮ ನಿರೂಪಿಸಿದರು . ಸೇವಾಪ್ರತಿನಿಧಿ ಪುಷ್ಪಲತಾ ವಂದಿಸಿದರು. ಸೇವಾಪ್ರತಿನಿಧಿ ಜಯಲಕ್ಷ್ಮಿ ಹಾಗೂ ಸಾಧನಾ ಜ್ಞಾನವಿಕಾಸ ಕೇಂದ್ರದ ಸದಸ್ಶರುಗಳು ಉಪಸ್ಥಿತರಿದ್ದರು .