Home ದಕ್ಷಿಣ ಕನ್ನಡ Kadaba: ಹೊಳೆ ಬದಿ ಬೈಕ್ ನಿಲ್ಲಿಸಿ ನಾಪತ್ತೆಯಾದ ವ್ಯಕ್ತಿ ಗುಂಡ್ಯ ಹೊಳೆಯಲ್ಲಿ ಶವವಾಗಿ ಪತ್ತೆ !

Kadaba: ಹೊಳೆ ಬದಿ ಬೈಕ್ ನಿಲ್ಲಿಸಿ ನಾಪತ್ತೆಯಾದ ವ್ಯಕ್ತಿ ಗುಂಡ್ಯ ಹೊಳೆಯಲ್ಲಿ ಶವವಾಗಿ ಪತ್ತೆ !

Kadaba

Hindu neighbor gifts plot of land

Hindu neighbour gifts land to Muslim journalist

Kadaba: ಉದನೆ ಸಮೀಪದ ರೆಕ್ಯಾ ಗ್ರಾಮದ ವ್ಯಕ್ತಿಯೊಬ್ಬರು ಆಗಸ್ಟ್ 14ರ ಸಂಜೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ಅವರ ಬೈಕ್ ಉದನೆ ಸಮೀಪದ ಕಡೆಂಬಿಲ ಎಂಬಲ್ಲಿ ಗುಂಡ್ಯ ಹೊಳೆಬದಿ ಹೆದ್ದಾರಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಊರ್ನಡ್ಕದ ನಿವಾಸಿ ಲೋಕೇಶ್(43ವ.)ಎಂಬವರು ನಾಪತ್ತೆಯಾಗಿದ್ದ( missing) ವ್ಯಕ್ತಿಯಾಗಿದ್ದು, ಲೋಕೇಶ್ ಅವರು ರಾತ್ರಿಯಾದರೂ ಮನೆಗೆ ಬರದಿದ್ದ ಹಿನ್ನೆಲೆ ಅಣ್ಣ ರಾಮಚಂದ್ರ ಗೌಡ ಮತ್ತು ಇತರರು ಬೈಕ್ ಇದ್ದ ಅಸುಪಾಸಿನಲ್ಲಿ ಗುಂಡ್ಯ ಕಿನಾರೆಯ ಬಳಿ ಹುಡುಕಾಟ ನಡೆಸಿದ್ದಾರೆ. ಆಗಸ್ಟ್ 14ರಂದು ಸಂಜೆ 4 ಗಂಟೆಗೆ ಸಾಮಾಗ್ರಿ ಖರೀದಿಗೆಂದು ಮನೆಯಿಂದ ತನ್ನ ಬೈಕ್ ನಲ್ಲಿ ಉದನೆ ಪೇಟೆಗೆಂದು ಹೋಗಿದ್ದರು ಎನ್ನಲಾಗಿದೆ.

ಗುಂಡ್ಯಹೊಳೆಯಲ್ಲಿ ಮುಳುಗಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆಗಸ್ಟ್ 15ರಂದು ಹೊಳೆನೀರಿನಲ್ಲಿ ಹುಡುಕಾಟ ನಡೆಸಲಾಗಿದೆ. ಲೋಕೇಶ್ ಅವರ ಅಣ್ಣ ನೆಲ್ಯಾಡಿಗೆ ಹೋಗಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ತಮ್ಮನ ಬೈಕ್ ಉದನೆ ಸಮೀಪ ಕಡೆಂಬಿಲ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ನಿಂತುಕೊಂಡಿರುವುದನ್ನು ನೋಡಿದ್ದರು ಎನ್ನಲಾಗಿದೆ.

ಮನೆ ಕೆಲಸ ನಿರ್ವಹಿಸಿ ಡೈರಿಗೆ ಹಾಲು ನೀಡಿ ಬರುವವರೆಗೆ ಲೋಕೇಶ್ ಅವರ ಬೈಕ್ ಅಲ್ಲೇ ನಿಂತಿದ್ದನ್ನು ಕಂಡು ತಮ್ಮ ಮತ್ತೆ ಕೂಡ ಮನೆಗೆ ಬರದ ಹಿನ್ನೆಲೆ ತಮ್ಮನಿಗೆ ಕರೆ ಮಾಡಿದ್ದು ಈ ವೇಳೆ ತಮ್ಮನ ಹೆಂಡತಿ ಮಾತಾಡಿದ್ದು ಮೊಬೈಲ್ ಮನೆಯಲ್ಲಿಯೇ ಇಟ್ಟು ಹೋಗಿರುವ ವಿಚಾರ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಆ.14ರಂದು ಸಂಜೆ ಮನೆಯಿಂದ ಉದನೆ ಪೇಟೆಗೆ ಬಂದಿದ್ದ ಲೋಕೇಶ್ ಅವರು ನಾಪತ್ತೆಯಾಗಿದ್ದರು. ಅವರ ಬೈಕ್ ಉದನೆ ಸಮೀಪ ಗುಂಡ್ಯ ಹೊಳೆಬದಿಯ ಕಡೆಂಬಿಲ ಎಂಬಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆ.15ರಂದು ಸಂಜೆ ತನಕ ಅಗ್ನಿಶಾಮಕ ಹಾಗೂ ಧರ್ಮಸ್ಥಳ ಶೌರ್ಯ ತಂಡದ ಸದಸ್ಯರು ಗುಂಡ್ಯ ಹೊಳೆಯಲ್ಲಿ ಹುಡುಕಾಟ ನಡೆಸಿದ್ದರು.ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ನೆಲ್ಯಾಡಿ ಹೊರಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ. ಸದ್ಯ, ನಾಪತ್ತೆಯಾಗಿದ್ದ ಉದನೆ ಸಮೀಪದ ರೆಖ್ಯ ಗ್ರಾಮದ ಊರ್ನಡ್ಕ ನಿವಾಸಿ ಲೋಕೇಶ್ (43ವ.)ರವರ ಮೃತದೇಹ ಆ.16ರಂದು ಮಧ್ಯಾಹ್ನದ ವೇಳೆಗೆ ಗುಂಡ್ಯ ಹೊಳೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಶ್ರೀರಾಮ ನನ್ನೆಲ್ಲ ಕಾರ್ಯಕ್ಕೆ ಶಕ್ತಿ ತುಂಬಿದ್ದಾನೆ :ರಾಮ ಕಥಾ ಧಾರ್ಮಿಕ ಕಾರ್ಯಕ್ರಮದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭೇಟಿ!